ಆಮ್ ಆದ್ಮಿಯಿಂದ 'ಕಸದಿಂದ ಮುಕ್ತಿ' ಅಭಿಯಾನ
ಬೆಂಗಳೂರು: ಆಮ್ ಆದ್ಮಿ ಪಕ್ಷ(ಎಎಪಿ) ನಗರದಲ್ಲಿ ಕಸ ವಿಲೇವಾರಿ ಸಮಸ್ಯೆಗೆ ಮುಕ್ತಿ ನೀಡುವ ಉದ್ದೇಶದಿಂದ ಆಗಸ್ಟ್ 3 ರಂದು 'ಕಸದಿಂದ ಮುಕ್ತಿ' ಎಂಬ ಅಭಿಯಾನ ಹಮ್ಮಿಕೊಂಡಿದೆ.
ಬಿ.ಟಿ.ಎಂ. ಲೇಔಟ್‌ನಲ್ಲಿರುವ ಬಾಲಾಜಿ ವೆಜ್ ಹೋಟೆಲ್‌ನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆಮ್ ಆದ್ಮಿ ಪಕ್ಷದ ರಾಜ್ಯ ಕಾರ್ಯಕಾರಿ ಸಮಿತಿಯ ಅಧ್ಯಕ್ಷ ರವಿಕೃಷ್ಣ ರೆಡ್ಡಿ ಅವರು ಕಸದ ಸಮಸ್ಯೆ ನಿರ್ಮೂಲನೇ ಮಾಡಲು , ಮನೆಗಳಲ್ಲಿಯೇ ಒಣ, ಹಸಿ, ಹಾನಿಕಾರಕ ತ್ಯಾಜ್ಯವನ್ನು ವಿಂಗಡಿಸಿ ಮರುಬಳಕೆ, ಸಂಸ್ಕರಣೆಗೆ ಸಹಕರಿಸಬೇಕು ಎಂದರು.