ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಇಸ್ರೇಲ್‌ ಗುಂಡಿನ ದಾಳಿಗೆ 50 ಮಂದಿ ಸಾವು

Vishwanath S
Updated On : 1 Aug 2014, 7:53 am

ಗಾಜಾ/ಜೆರುಸಲೇಂ: ಗಾಜಾ ಪಟ್ಟಿಯಲ್ಲಿ ಅಮೆರಿಕಾ ಮತ್ತು ವಿಶ್ವಸಂಸ್ಥೆಯ ಮಧ್ಯಸ್ಥಿಕೆಯಲ್ಲಿ ಶುಕ್ರವಾರ 72 ಗಂಟೆಗಳ ಕದನ ವಿರಾಮ ಆರಂಭಗೊಂಡ ಎರಡೇ ಗಂಟೆಗಳಲ್ಲಿ ಉಲ್ಲಂಘನೆಯಾಗಿದ್ದು, ಇಸ್ರೇಲ್‌ನ ಗುಂಡಿನ ದಾಳಿಗೆ 50 ಮಂದಿ ಪ್ಯಾಲೆಸ್ತೈನರು ಮೃತಪಟ್ಟಿದ್ದಾರೆ.

ದಕ್ಷಿಣ ರಫಿಯಾ ಪ್ರದೇಶದ ಸಮೀಪ ನಡೆದ ಇಸ್ರೇಲ್‌ನ ಗುಂಡಿನ ದಾಳಿಗೆ 50 ಮಂದಿ ಪ್ಯಾಲೆಸ್ತೈನರು ಮೃತಪಟ್ಟಿದ್ದಾರೆ. ಕದನ ವಿರಾಮ ಉಲ್ಲಂಘನೆ ಕುರಿತು ಉಗ್ರಗಾಮಿಗಳು ಮತ್ತು ಇಸ್ರೇಲ್ ಪರಸ್ಪರ ಆರೋಪ ಮಾಡುತ್ತಿವೆ.

ಗಾಜಾ ಪಟ್ಟಿಯಲ್ಲಿ ಷೆಲ್ ದಾಳಿ ನಡೆಸುವ ಮೂಲಕ ಇಸ್ರೇಲ್ ನಾಲ್ವರನ್ನು ಕೊಂದು ಹಾಕಿದೆ ಎಂದು ಪ್ಯಾಲೆಸ್ತೈನ್ ಉಗ್ರಗಾಮಿ ಗುಂಪುಗಳು ಹಾಗು ಉಗ್ರಗಾಮಿಗಳು ರಾಕೆಟ್‌ಗಳನ್ನು ಉಡಾಯಿಸುತ್ತಿದ್ದಾರೆ ಎಂದು ಇಸ್ರೇಲ್ ದೂರಿದೆ.

ಇಸ್ರೇಲ್ ಹಾಗೂ ಪ್ಯಾಲೆಸ್ತೈನ್ ಉಗ್ರಗಾಮಿಗಳು ನಡುವಿನ ಸಂಘರ್ಷದಲ್ಲಿ ಸುಮಾರು 1499 ಪ್ಯಾಲೆಸ್ತೈನ್ ನಾಗರೀಕರು ಹತರಾಗಿದ್ದು, 7 ಸಾವಿರ ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಇದಲ್ಲಿ 61 ಮಂದಿ ಇಸ್ರೇಲ್ ಯೋಧರು ಮೃತಪಟ್ಟಿದ್ದು, 400 ಮಂದಿಗೆ ಗಾಯಗಳಾಗಿವೆ ಎಂದು ಗಾಜಾ ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement