ಇಮಾಮ್ ಬುಖಾರಿ ಕೋಮುವಾದಿ: ದಿಗ್ವಿಜಯ್ ಸಿಂಗ್
ದೆಹಲಿ ಜಮಾ ಮಸೀದಿಯ ಶಾಹಿ ಇಮಾಮ್ ಸಯ್ಯದ್ ಬುಖಾರಿ...
ನವದೆಹಲಿ: ದೆಹಲಿ ಜಮಾ ಮಸೀದಿಯ ಶಾಹಿ ಇಮಾಮ್ ಸಯ್ಯದ್ ಬುಖಾರಿ ಅವರು ಕೋಮುವಾದಿ ಎಂದು ಹೇಳುವ ಮೂಲಕ ಕಾಂಗ್ರೆಸ್ನ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ.
ನಾನು ಅವರನ್ನು ಜಾತ್ಯಾತೀತವಾದಿ ಎಂದು ಪರಿಗಣಿಸುವುದಿಲ್ಲ, ನಾನವರನ್ನು ಕೋಮುವಾದಿ ಎಂದು ಪರಿಗಣಿಸುತ್ತೇನೆ ಎಂದು ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.
ಬುಖಾರಿ ಅವರನ್ನು ದಿಗ್ವಿಜಯ್ ಸಿಂಗ್ ಕೋಮುವಾದಿ ಎಂದು ಕರೆದಿರುವುದು ಇದೇ ಮೊದಲ ಬಾರಿಯೇನೂ ಅಲ್ಲ. 2012ರಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿಗೆ ಮತ ನೀಡಿ ಎಂದು ಬುಖಾರಿ ಅವರು ಉತ್ತರಪ್ರದೇಶದ ಮುಸ್ಲಿಂರಿಗೆ ಕರೆಕೊಟ್ಟಾಗ ದಿಗ್ವಿಜಯ್ ಸಿಂಗ್ ಇದೇ ರೀತಿ ಹೇಳಿದ್ದರು.
ಒಂದು ಕಾಲದಲ್ಲಿ ಒಸಾಮಾ ಬಿನ್ ಲಾಡೆನ್ ಅವರಿಗೆ ಬೆಂಬಲ ನೀಡಿದ ಬುಖಾರಿ, 2004ರಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಅನುಕೂಲವಾಗುವಂತೆ ಫತ್ವಾ ಹೊರಡಿಸಿದ ಬುಖಾರಿ ಕೋಮುವಾದಿ ಎಂದು ಸಿಂಗ್ ಹೇಳಿದ್ದಾರೆ.
ಆದಾಗ್ಯೂ, ಚುನಾವಣೆಗೆ ಮುನ್ನು ಸೋನಿಯಾ ಗಾಂಧಿ ಶಾಹಿ ಇಮಾಮ್ರನ್ನ ಭೇಟಿ ಮಾಡಿದ್ದನ್ನು ಕಾಂಗ್ರೆಸ್ ನೇತಾರ ಮೌಲಾನಾ ಅಸ್ರಾರುಲ್ ಹಕ್ ಟೀಕಿಸಿದ್ದರ ಹಿನ್ನೆಲೆಯಲ್ಲಿ ದಿಗ್ವಿಜಯ್ ಸಿಂಗ್ ಈ ರೀತಿ ವಾಗ್ದಾಳಿ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.