ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಗ್ಯಾಂಗ್‌ರೇಪ್ ಮಾಡಿ, ಆ್ಯಸಿಡ್ ಕುಡಿಸಿ ಹತ್ಯೆ!

ಉತ್ತರಪ್ರದೇಶದ ಬಹೇರಿ ಪ್ರದೇಶದಲ್ಲಿ 22ರ ಹರೆಯದ ಯುವತಿಯೊಬ್ಬಳನ್ನು ಸಾಮೂಹಿಕ ಅತ್ಯಾಚಾರಗೈದು, ಬಲವಂತವಾಗಿ...

Rashmi Kasaragodu
Updated On : 2 Jun 2014, 3:40 am

ಬರೇಲಿ: ಉತ್ತರಪ್ರದೇಶದ ಬಹೇರಿ ಪ್ರದೇಶದಲ್ಲಿ 22ರ ಹರೆಯದ ಯುವತಿಯೊಬ್ಬಳನ್ನು ಸಾಮೂಹಿಕ ಅತ್ಯಾಚಾರಗೈದು, ಬಲವಂತವಾಗಿ ಆ್ಯಸಿಡ್ ಕುಡಿಸಿ ಹತ್ಯೆಗೈದ ಘಟನೆ ಸೋಮವಾರ ವರದಿಯಾಗಿದೆ.

ಅತ್ಯಾಚಾರಕ್ಕೊಳದ ಯುವತಿಯ ಮೃತದೇಹ ಶಿವರಾ ಐತಾಪುರ ಗ್ರಾಮದಲ್ಲಿ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆಯ ನಂತರ ಸಿಕ್ಕ ವರದಿಯಲ್ಲಿ ಯುವತಿಯನ್ನು ಸಾಮೂಹಿಕ ಅತ್ಯಾಚಾರಗೈದು ನಂತರ ಹತ್ಯೆ ಮಾಡಲಾಗಿದೆ ಎಂದು ಹೇಳಲಾಗಿದೆ.

ಯುವತಿಯ ಹೊಟ್ಟೆಯಲ್ಲಿ ಆ್ಯಸಿಡ್ ಪತ್ತೆಯಾಗಿರುವ ಕಾರಣ, ಆಕೆಯನ್ನು ಸಾಯಿಸುವುದಕ್ಕಿಂತ ಮುನ್ನ ಆಕೆಗೆ ಬಲವಂತವಾಗಿ  ಆ್ಯಸಿಡ್ ಕುಡಿಸಲಾಗಿದೆ . ಹತ್ಯೆಗೈದ ನಂತರ ಆಕೆಯ ಮುಖಕ್ಕೆ ಆ್ಯಸಿಡ್ ಮತ್ತು ಪೆಟ್ರೋಲ್ ಎರಚಿ ಆಕೆಯ ಗುರುತು ಸಿಗದಂತೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಇದು ಮರ್ಯಾದಾ ಹತ್ಯೆಯಾಗಿರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement