ದೆಹಲಿ ಸ್ಫೋಟಕ್ಕೆ ದಾವುದ್ ಸಂಚು
ದಾವೂದ್ಗೆ ಮುಂಬೈ ಸರಣಿ ಬಾಂಬ್ ಸ್ಫೋಟದ ಅಪರಾಧಿ ಟೈಗರ್ ಮೆಮನ್ ಸಾಥ್
ನವದೆಹಲಿ: ದೆಹಲಿಯಲ್ಲಿ ಬಾಂಬ್ ಸ್ಫೋಟಿಸಲು ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಂಚು ರೂಪಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಈ ಸಂಬಂಧ ಪಾಕಿಸ್ತಾನದ ಐಎಸ್ಐ ಜೊತೆ ದಾವೂದ್ ಚರ್ಚೆ ನಡಿಸಿದ್ದಾನೆ ಎಂದು ತಿಳಿದು ಬಂದಿದೆ.
1993ರಲ್ಲಿ ನಡೆದ ಮುಂಬೈ ಸರಣಿ ಬಾಂಬ್ ಸ್ಫೋಟದ ಅಪರಾಧಿ ಟೈಗರ್ ಮೆಮನ್ ದಾವೂದ್ಗೆ ಸಾಥ್ ನೀಡಿದ್ದು, ಮೇ 15 ಮತ್ತು 16ರಂದು ಚರ್ಚೆ ನಡೆಸಿರುವುದರ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆಗೆ ಮಾಹಿತಿ ಲಭ್ಯವಾಗಿದೆ.
ದೆಹಲಿಯಲ್ಲಿ ಬಾಂಬ್ ಸ್ಫೋಟಿಸುವುದರ ಬಗ್ಗೆ ಮೇ 15 ಮತ್ತು 16ರಂದು ದಾವೂದ್, ಪಾಕಿಸ್ತಾನದ ಐಎಸ್ಐ ಜೊತೆ ಚರ್ಚೆ ನಡೆಸಿದ್ದು, ಪ್ರಧಾನಿ ನರೇಂದ್ರ ಮೋದಿ ಸಾಮರ್ಥ್ಯ ಪರೀಕ್ಷೆಗೆ ಈ ಪ್ಲಾನ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.