ಯಾಕೂಬ್ ಮೆಮನ್ ಗಲ್ಲುಶಿಕ್ಷೆಗೆ ಸುಪ್ರೀಂ ತಡೆ
1993ರಲ್ಲಿ ನಡೆದ ಮುಂಬೈ ಸರಣಿ ಬಾಂಬ್ ಸ್ಫೋಟದ ಅಪರಾಧಿ ಯಾಕೂಬ್...
ನವದೆಹಲಿ: 1993ರಲ್ಲಿ ನಡೆದ ಮುಂಬೈ ಸರಣಿ ಬಾಂಬ್ ಸ್ಫೋಟದ ಅಪರಾಧಿ ಯಾಕೂಬ್ ಮೆಮನ್ ಗಲ್ಲುಶಿಕ್ಷೆಗೆ ಸುಪ್ರೀಂ ಕೋರ್ಟ್ ಸೋಮವಾರ ತಡೆ ಹಾಕಿದೆ.
ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಯಾಕೂಬ್ ಮೆಮನ್ ಸಲ್ಲಿಸಿದ್ದ ಕ್ಷಮಾಧಾನ ಅರ್ಜಿ ತಿರಸ್ಕೃತಗೊಂಡಿತ್ತು. ಇದರ ಬೆನ್ನಲ್ಲೆ ಸುಪ್ರೀಂ ಕೋರ್ಟ್ ಯಾಕೂಬ್ ಗಲ್ಲುಶಿಕ್ಷೆಗೆ ತಡೆ ಹಾಕಿದೆ.
ಮಹಾರಾಷ್ಟ್ರ ಸರ್ಕಾರ ಮತ್ತು ಗೃಹ ಸಚಿವಾಲಯ ಶಿಫಾರಸ್ಸಿನ ಮೇರೆಗೆ ಮೇ 21ರಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಯಾಕೂಬ್ ಕ್ಷಮಾಧಾನ ಅರ್ಜಿಯನ್ನು ವಜಾಗೊಳಿಸಿದ್ದರು.
1993ರ ಮುಂಬೈ ಸರಣಿ ಸ್ಪೋಟ ಪ್ರಕರಣದ ಅಪರಾಧಿ ಯಾಕೂಬ್ ಅಬ್ದುಲ್ ರಜಾಕ್ ಮೆಮನ್‌ಗೆ ಟಾಟಾ ಕೋರ್ಟ್ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿತ್ತು.
ಆದರೆ ಇಂದು ಅದೇ ಸುಪ್ರೀಂ ಕೋರ್ಟ್ ಯಾಕೂಬ್ ಮೆಮನ್ ಗಲ್ಲುಶಿಕ್ಷೆಗೆ ತಡೆ ನೀಡಿದೆ.
1993ರ ಮಾರ್ಚ್‌ನಲ್ಲಿ ಮುಂಬೈನ 13 ಸ್ಥಳಗಳಲ್ಲಿ ಸ್ಫೋಟ ಸಂಭವಿಸಿತ್ತು. ಈ ಸರಣಿ ಸ್ಫೋಟಗಳಲ್ಲಿ 257 ಜನ ಮೃತಪಟ್ಟಿದ್ದರು ಮತ್ತು 713 ಜನ ಗಾಯಗೊಂಡಿದ್ದರು.
ದೆಹಲಿ ಬಾಂಬ್ ಸ್ಫೋಟಕ್ಕೆ ಸಂಚು ರೂಪಿಸಿರುವ ದಾವೂದ್ ಇಬ್ರಾಹಿಂಗೆ ಸಾಥ್ ನೀಡಿರುವ ಟೈಗರ್ ಮೆಮನ್‌ನ ಸಹೋದರ ಯಾಕೂಬ್ ಮೆಮನ್.