ಲೋಕಸಭೆಯಲ್ಲಿ ಖರ್ಗೆಗೆ ನಾಯಕನ ಪಟ್ಟ
ಸಂಸತ್‌ನಲ್ಲಿ ರಾಹುಲ್ ಗಾಂಧಿಗೆ ನಾಯಕತ್ವ ಪಟ್ಟ ನೀಡಬೇಕೆಂಬ ಒತ್ತಾಯವನ್ನು ತಳ್ಳಿ ಇದೀಗ ಕಾಂಗ್ರೆಸ್ ಮಾಜಿ ರೇಲ್ವೇ ...
ನವದೆಹಲಿ: ಸಂಸತ್‌ನಲ್ಲಿ ರಾಹುಲ್ ಗಾಂಧಿಗೆ ನಾಯಕತ್ವ ಪಟ್ಟ ನೀಡಬೇಕೆಂಬ ಒತ್ತಾಯವನ್ನು ತಳ್ಳಿ ಇದೀಗ ಕಾಂಗ್ರೆಸ್ ಮಾಜಿ ರೇಲ್ವೇ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಲೋಕಸಭೆಯ ವಿಪಕ್ಷ ನಾಯಕರನ್ನಾಗಿ ಘೋಷಿಸಿದೆ.
ಮಲ್ಲಿಕಾರ್ಜುನ ಖರ್ಗೆ ಅವರಿಗೆ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕನ ಪಟ್ಟವನ್ನು ನೀಡಲಾಗಿದೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಜನಾರ್ದನ್ ದ್ವಿವೇದಿ ಹೇಳಿದ್ದಾರೆ.
ಈ ಹಿಂದೆ ವಿಪಕ್ಷ ನಾಯಕರಾಗಿ ರಾಹುಲ್ ಗಾಂಧಿ ಅವರನ್ನು ನೇಮಕ ಮಾಡಬೇಕೆಂದು ಇಂಡಿಯನ್ ಯೂತ್ ಕಾಂಗ್ರೆಸ್ (ಐವೈಸಿ ) ಒತ್ತಾಯಿಸಿತ್ತು. ಆದರೆ ಇದೀಗ ಕಾಂಗ್ರೆಸ್ ಹಿರಿಯ ನಾಯಕ ಗುಲ್ಬರ್ಗಾ ಸಂಸದ ಖರ್ಗೆ ಅವರನ್ನು ನಾಯಕರನ್ನಾಗಿ ಘೋಷಣೆ ಮಾಡುವ ಮೂಲಕ ತಮ್ಮ ನಿರ್ಧಾರವನ್ನು ಪ್ರಕಟಿಸಿದೆ.