ವಾರಣಾಸಿ 'ಪವರ್ ಕಟ್ ಫ್ರೀ' ಜಿಲ್ಲೆಯಾಗಿ ಘೋಷಣೆ
ವಾರಣಾಸಿ ಜಿಲ್ಲೆಯನ್ನಿ ಪವರ್ ಕಟ್ ಫ್ರೀ ಜಿಲ್ಲೆಯಾಗಿ ಘೋಷಿಸಬೇಕೆಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್...
ವಾರಣಾಸಿ: ವಾರಣಾಸಿ ಜಿಲ್ಲೆಯನ್ನಿ ಪವರ್ ಕಟ್ ಫ್ರೀ ಜಿಲ್ಲೆಯಾಗಿ ಘೋಷಿಸಬೇಕೆಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಆದೇಶ ಹೊರಡಿಸಿದ್ದಾರೆ.
ವಾರಣಾಸಿಯಲ್ಲಿ ವಿದ್ಯುತ್ ಕಡಿತ ಇಲ್ಲದೇ ಇರುವುದರಿಂದ ಪ್ರಸ್ತುತ ಜಿಲ್ಲೆಯನ್ನು ಪವರ್ ಕಟ್ ಫ್ರೀ ಜಿಲ್ಲೆಯಾಗಿ ಘೋಷಿಸಿ ಎಂದು ಪೂರ್ವಾಂಚಲ್ ವಿದ್ಯುತ್ ವಿತರಣ್ ನಿಗಮ್ ಲಿಮಿಟೆಡ್ನ ಎಂಡಿ ಎಪಿ ಮಿಶ್ರಾ ಅವರಿಗೆ ಅಖಿಲೇಶ್ ಆದೇಶಿಸಿದ್ದಾರೆ.
ದಕ್ಷಿಣ ವಾರಣಾಸಿಯಲ್ಲಿ ಏಳು ಬಾರಿ ಶಾಸಕರಾಗಿರುವ ಶ್ಯಾಮ್ಡಿಯೋ ರಾಯ್ಚೌಧರಿ ಅವರನ್ನು ಭೇಟಿ ಮಾಡಿ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಉಪವಾಸ ಸತ್ಯಾಗ್ರಹ ಕೊನೆಗೊಳಿಸುವಂತೆ ಒತ್ತಾಯಿಸಿದ್ದಾರೆ.
ವಾರಣಾಸಿಗೆ ಇಂಥದೊಂದು ಮಾನ್ಯತೆ ಬೇಕು ಎಂದು ರಾಯ್ ಚೌಧರಿ ಅವರು ಮೇ 27ರಂದು ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು.