ನೇಪಾಳ ರಸ್ತೆ ಅಪಘಾತ: ಮೃತಪಟ್ಟ 18 ಮಂದಿ ಭಾರತೀಯರು
ಕಠ್ಮಂಡು: ನೇಪಾಳದ ಪರ್ವತ ಪ್ರದೇಶದಲ್ಲಿ ಪ್ರಯಾಣಿಕರಿಂದ ತುಂಬಿದ್ದ ಬಸ್ಸೊಂದು ಬೆಟ್ಟದ ಮೇಲಿಂದ ಉರುಳಿ ನದಿಗೆ ಬಿದ್ದ ಪರಿಣಾಮ 18ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು, ಮೃತರೆಲ್ಲ ಭಾರತೀಯರು ಎಂದು ತಿಳಿದುಬಂದಿದೆ.
ಈ ಪೈಕಿ ಮೃತಪಟ್ಟ 18 ಮಂದಿ ಭಾರತೀಯ ಪ್ರವಾಸಿಗರು ಎಂದು ಗುರುತಿಸಲಾಗಿದ್ದು, ಭಾರತದ ಉತ್ತಪ್ರದೇಶದ ಮೂಲದ ಭಕ್ತರು ಎಂದು ತಿಳಿದುಬಂದಿದೆ. ತೀರ್ಥಯಾತ್ರೆಗೆಂದು ತೆರಳಿದ್ದ ಇವರು ವಿಧಿಯಾಟಕ್ಕೆ ಬಲಿಯಾಗಿದ್ದಾರೆ.
ಇಂದು ಪ್ರವಾಸಿಗರನ್ನು ಕರೆದುಕೊಂಡು ಹೋಗುತ್ತಿದ್ದ ಬಸ್ ಬೆಟ್ಟದ ಮೇಲಿನಿಂದ ಪಲ್ಟಿ ಹೊಡೆದು ನೂರು ಮೀಟರ್ ಕೆಳಗಿನ ನದಿಗೆ ಬಿದ್ದಿದೆ. ಈ ಪ್ರವಾಸಿಗರು ಕಪಿಲವಸ್ತುವಿನ ಕೃಷ್ಣನಗರಕ್ಕೆ ಭೇಟಿ ನೀಡಿ ಅಲ್ಲಿನ ಸ್ವರ್ಗದಾರಿ ದೇವಸ್ಥಾನದ ದರ್ಶಣ ಪಡೆದು ವಾಪಸ್ಸಾಗುತ್ತಿದ್ದಾಗ ನೇಪಾಳದ ಪಶ್ಚಿಮ ಭಾಗದಲ್ಲಿನ ಮೋದಿಹೊಳ್ಳ ನದಿಗೆ ಬಿದ್ದಿದೆ.
ಅಪಘಾತಕ್ಕೆ ಕಾರಣ ಸಾಮಥ್ಯಕ್ಕಿಂತ ಹೆಚ್ಚು ಪ್ರಯಾಣಿಕರನ್ನು ತುಂಬಿಸಿದ್ದೇ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.