ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಮಹಾಜನ್ - ಮುಂಡೆ ಕುಟುಂಬಕ್ಕೆ ಕಂಟಕವಾಯ್ತೆ 'ನಂಬರ್ 3'!

ಮಾಜಿ ಕೇಂದ್ರ ಸಚಿವ ದಿ. ಪ್ರಮೋದ್ ಮಹಾಜನ್ ಅವರ ಕುಟುಂಬಕ್ಕೆ ನಂಬರ್ ಮೂರು ಕಂಟಕವಾಗಿ ಕಾಡುತ್ತಿದೆ ಎಂಬುದು ಮಂಗಳವಾರ ಮತ್ತೊಮ್ಮೆ ಸಾಬೀತಾಗಿದೆ.

Vishwanath S
Updated On : 3 Jun 2014, 6:02 am

ಥಾಣೆ: ಮಾಜಿ ಕೇಂದ್ರ ಸಚಿವ ದಿ. ಪ್ರಮೋದ್ ಮಹಾಜನ್ ಹಾಗೂ ಮುಂಡೆ ಅವರ ಕುಟುಂಬಕ್ಕೆ ನಂಬರ್ ಮೂರು ಕಂಟಕವಾಗಿ ಕಾಡುತ್ತಿದೆ ಎಂಬುದು ಮಂಗಳವಾರ ಮತ್ತೊಮ್ಮೆ ಸಾಬೀತಾಗಿದೆ.

ಇಂದು ಬೆಳಗ್ಗೆ ತಾನೇ ಕಾರು ಅಪಘಾತದಲ್ಲಿ ಗಾಯಗೊಂಡು ವಿಧವಶರಾದ ಮಹಾಜನ್ ಸಂಬಂಧಿ ಹಾಗು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಗೋಪಿನಾಥ್ ಮುಂಡೆ ಮೃತಪಟ್ಟಿದ್ದು, ಇದೇ ಮೂರರಂದು. ಮಹಾಜನ್ ಕುಟುಂಬಕ್ಕೆ ಕಂಟಕವಾಗಿ ಕಾಡುತ್ತಿರುವ ದಿನಾಂಕ ಮೂರರ ಇತಿಹಾಸ ಕೆದಕ್ಕುತ್ತಾ ಹೋದರೆ ಈ ಕುಟುಂಬದ ಹಲವು ನಾಯಕರು ಈ ದಿನದಂದೆ ಮೃತಪಟ್ಟಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಇಂತ ಘಟನೆಗಳಿಗೆ ಮುನ್ನಡಿ ಶುರುವಾಗಿದ್ದು ಸುಮಾರು 8 ವರ್ಷಗಳ ಹಿಂದೆ. ಅಂದರೆ ಸಹೋದರ ಪ್ರವೀಣ್ ಮಹಾಜನ್‌ರ ಗುಂಡೇಟಿನಿಂದ ಗಾಯಗೊಂಡು ಹಿಂದುಜಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪ್ರಮೋದ್ ಮಹಾಜನ್ ಮೃತಪಟ್ಟಿದ್ದು, ಮೇ 3, 2006 ರಂದು.

ಪ್ರಮೋದ್ ಮಹಾಜನ್ ಹತರಾದ ಒಂದು ತಿಂಗಳ ನಂತರದಲ್ಲಿ ಅಂದರೆ ಜೂ 3, 2006ರಂದು ಮಹಾಜನ್ ಅವರ ಸಹಾಯಕನಾಗಿದ್ದ ವಿವೇಕ್ ಮೊಯಿತ್ರಾ ಸಾವನ್ನಪ್ಪಿದ್ದರು. ಅದೇ ದಿನ ಮಹಾಜನ್ ಅವರ ಪುತ್ರ ರಾಹುಲ್ ಅತಿಯಾದ ಮಾದಕ ದ್ರವ್ಯ ಸೇವನೆಯಿಂದ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದರು.

ಇದಾದ ಬಳಿಕ ಸುಮಾರು 3 ವರ್ಷಗಳ ಕಾಲ ನೆಮ್ಮದಿಯಿಂದಿದ್ದ ಮಹಾಜನ್ ಕುಟುಂಬಕ್ಕೆ ಮತ್ತೊಂದು ಕಂಟಕ ಎದುರಾಯಿತು. ಮಾರ್ಚ್ 3, 2010ರಲ್ಲಿ ಮೆದುಳು ರಕ್ತಸ್ರಾವದಿಂದ ಬಳುತ್ತಿದ್ದ ಪ್ರವೀಣ್ ಮಹಾಜನ್‌ರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದರು. ಹೀಗೆ ದಿನಾಂಕ 3 ರಂದು ಮಹಾಜನ್ ಕುಟುಂಬದ ಪ್ರಮುಖರು ವಿಧಿವಶರಾಗಿದ್ದಾರೆ.

ಕಳೆದ ವಾರವಷ್ಟೇ ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ಪೀಕರಿಸಿದ್ದ ಗೋಪಿನಾಥ್ ಮುಂಡೆ ಸಹ ಜೂನ್ 3, 2014 ರಂದು, ಅಂದರೆ ಇಂದೇ ಕಾರು ಅಪಘಾತದಲ್ಲಿ ಗಾಯಗೊಂಡು ಸಾವನ್ನಪ್ಪಿರುವುದು ದಿನಾಂಕ 3 ಮಹಾಜನ್ ಕುಟುಂಬಕ್ಕೆ ಆಗಿಬರುವುದಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ಈ ಸಂಬಂಧ ಖಾಸಗಿ ಸುದ್ದಿ ವಾಹಿನಿಯೊಂದಿಗೆ ಮಾತನಾಡಿದ ಸಾರಂಗಿ ಮಹಾಜನ್ ಅವರು, ಪ್ರಮೋದ್ ಮತ್ತು ಪ್ರವೀಣ್ ಮಹಾಜನ್ ಅವರು ಸಾವು ಆಕಸ್ಮಿಕ ಎಂದು ಭಾವಿಸಿದ್ದೇವು. ಆದರೆ ಗೋಪಿನಾಥ್ ಮುಂಡೆ ಸಾವಿನೊಂದಿಗೆ ಎಲ್ಲಾ ಭರವಸೆಗಳು ಛಿದ್ರವಾಗಿದ್ದು, ಇನ್ನು ಮುಂದೆ ಕುಟುಂಬಸ್ಥರ ಕುರಿತಾಗಿ ಎಚ್ಚರಿಕೆ ವಹಿಸುವುದಾಗಿ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement