ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ರವೀಂದ್ರನಾಥ್ ಮೊಬೈಲ್‌ನಲ್ಲಿ ಯುವತಿ ಫೋಟೋ ಪತ್ತೆ: ಸಿಐಡಿ

Vishwanath S
Updated On : 3 Jun 2014, 5:44 am

ಬೆಂಗಳೂರು: ತೀವ್ರ ಸಂಚಲನ ಮೂಡಿದ್ದ ಕಾಫಿ ಶಾಪ್‌ನಲ್ಲಿ ಯುವತಿ ಪೋಟೋ ಕ್ಲಿಕ್ಕಿಸಿದ ಪ್ರಕರಣ ಮಂಗಳವಾರ ಹೊಸ ತಿರುವು ಪಡೆದುಕೊಂಡಿದೆ.  

ಸಿಐಡಿ ಅಧಿಕಾರಿಗಳು ಪ್ರಕರಣ ಸಂಬಂದ ತನಿಖೆ ನಡೆಸುತ್ತಿದ್ದು, ತನಿಖೆ ವೇಳೆ ಎಡಿಜಿಪಿ ಪಿ. ರವೀಂದ್ರನಾಥ್ ಮೊಬೈಲ್‌ನಲ್ಲಿ ಯುವತಿಯ ಎರಡು ಛಾಯಾಚಿತ್ರಗಳು ಪತ್ತೆಯಾಗಿರುವುದು  ಇದೀಗ ಕೂತುಹಲಕ್ಕೆ ಕಾರಣವಾಗಿದೆ.

ರವೀಂದ್ರನಾಥ್ ಅವರ ಮೊಬೈಲ್ ಅನ್ನು ಪರೀಕ್ಷಿಸಿದ ಸಿಐಡಿ ಅಧಿಕಾರಿಗಳು ಅದರಲ್ಲಿ ದೂರು ನೀಡಿರುವ ಯುವತಿಯ ಫೋಟೋ ಪತ್ತೆಯಾಗಿದ್ದು, ಈ ಫೋಟೋಗಳನ್ನು ಬೆಳಗ್ಗೆ 10.47ಕ್ಕೆ ಒಂದು ಹಾಗೂ 10.48ಕ್ಕೆ ಮೊತ್ತೊಂದನ್ನು ಕ್ಲಿಕ್ಕಿಸಲಾಗಿದೆ ಎಂದು ಸಿಐಡಿ ಮೂಲಗಳಿಂದ ತಿಳಿದುಬಂದಿದೆ.

ಫೋಟೋಗಳ ಸತ್ಯಾಸತ್ಯತೆ ತಿಳಿದುಕೊಳ್ಳುವ ಸಲುವಾಗಿ ಸಿಐಡಿ ಅಧಿಕಾರಿಗಳು ಮೊಬೈಲನ್ನು ಗುಜರಾತ್ ನ ಅಹಮದಾಬಾದ್ ಫೊರೆನ್ಸಿಕ್ ಲ್ಯಾಬ್ ಗೆ ಕಳುಹಿಸಿದ್ದಾರೆ.

ರವೀಂದ್ರನಾಥ್ ಅವರ ಮೊಬೈಲ್‌ನಲ್ಲಿ ಛಾಯಾಚಿತ್ರವಿರುವುದು ಸ್ಪಷ್ಟವಾಗಿದೆ ಆದರೆ ಈ ಚಿತ್ರಗಳನ್ನು ರವೀಂದ್ರನಾಥ್ ಅವರೇ ಕ್ಲಿಕ್ಕಿಸಿದ್ದಾರಾ? ಅಥವಾ ಬೇರೆ ಮೊಬೈಲ್‌ನಲ್ಲಿ ಕ್ಲಿಕ್ಕಿಸಿದ ಫೋಟೋಗಳನ್ನು ಬ್ಲೂ ಟೂಥ್ ಮೂಲಕ ಕಳಿಸಲಾಗಿದೆಯೇ ಎಂಬುದು ತಜ್ಞರ ಪರೀಕ್ಷೆಯಿಂದಷ್ಟೇ ತಿಳಿಯಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement