ಉ.ಪ್ರದೇಶ: ಉಚಿತ ಲ್ಯಾಪ್ ಟಾಪ್ ಯೋಜನೆ ಕೈಬಿಟ್ಟ ಎಸ್ಪಿ ಸರ್ಕಾರ
ಕಳೆದ ಲೋಕಸಭಾ ಚುನಾವಣೆಯಲ್ಲಿ...
ಲಖನೌ: ಕಳೆದ ಲೋಕಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಹೀನಾಯ ಸೋಲಿನ ಹಿನ್ನೆಲೆಯಲ್ಲಿ ಉತ್ತರಪ್ರದೇಶದಲ್ಲಿ ವಿದ್ಯಾರ್ಧಿಗಳಿಗೆ ಉಚಿತವಾಗಿ ಲ್ಯಾಪ್ ಟಾಪ್ ನೀಡುತ್ತೇವೆ ಎಂದಿದ್ದ ಎಸ್ಪಿ ಸರ್ಕಾರ ಬುಧವಾರ ರದ್ದುಪಡಿಸಿದೆ.
ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಉತ್ತರಪ್ರದೇಶದ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್ ಟಾಪ್ ನೀಡುವ ಯೋಜನೆಯನ್ನು ಮುಖ್ಯಮಂತ್ರಿ ಅಖಿಲೇಶ್ ಯಾದವ್ ಸರ್ಕಾರ ಕೈಬಿಟ್ಟಿದ್ದು, 20 ಸಾವಿರ ಕೋಟಿ ವೆಚ್ಚದ ಯೋಜನೆಯನ್ನು ಇದಾಗಿತ್ತು.
ಉತ್ತರಪ್ರದೇಶದ 80 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ಭರ್ಜರಿಯಾಗಿ 71 ಕ್ಷೇತ್ರಗಳನ್ನು ಗೆಲುವ ಮೂಲಕ ದಾಖಲೆ ಸೃಷ್ಠಿಸಿತ್ತು. ಆದರೆ ಆ ಪೈಕಿ ಸಮಾಜವಾದಿ ಪಕ್ಷ ಕೇವಲ 5 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿತ್ತು. ಇದರಿಂದ ಬೇಸೆತ್ತಿರುವ ಸಮಾಜವಾದಿ ಪಕ್ಷ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಉಚಿತ ಲ್ಯಾಪ್ ಟಾಪ್ ಯೋಜನೆಗೆ ತಿಲಾಂಜಲಿ ಹಾಕಿದೆ.