ನಮ್ಮ ಸರ್ಕಾರ ಜನತೆಯ ಅಭಿಲಾಷೆಯನ್ನು ಈಡೇರಿಸಲಿದೆ: ಮೋದಿ
ಭಾರತೀಯ ಜನತಾ ಪಕ್ಷ(ಬಿಜೆಪಿ) ನೇತೃತ್ವದ ಕೇಂದ್ರ ಸರ್ಕಾರ ಜನತೆಯ...
ನವದೆಹಲಿ: ಭಾರತೀಯ ಜನತಾ ಪಕ್ಷ(ಬಿಜೆಪಿ) ನೇತೃತ್ವದ ಕೇಂದ್ರ ಸರ್ಕಾರ ಜನತೆಯ ಅಭಿಲಾಷೆಯನ್ನು ಪೂರ್ಣಗೊಳಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದ್ದಾರೆ.
ನೂತನ ಸರ್ಕಾರದ ಮೊದಲ ಅಧಿವೇಶನ ಪ್ರಾರಂಭವಾಗುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಮೋದಿ, ನಮ್ಮ ಮೇಲೆ ಭರವಸೆ ಇಟ್ಟು ಜನ ಆಯ್ಕೆ ಮಾಡಿದ್ದಾರೆ. ಜನತೆ ಆಕಾಂಕ್ಷೆಯನ್ನು ಪೂರ್ಣಗೊಳಿಸುವುದೇ ಸರ್ಕಾರ ಗುರಿಯಾಗಿದೆ ಎಂದು ಮೋದಿ ತಿಳಿಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ನಮ್ಮನ್ನು ಗೆಲ್ಲಿಸಿದ ಜನತೆಗೆ ಅಭಿನಂದನೆ. ಪ್ರಜಾಪ್ರಭುತ್ವ ಎಂಬ ದೇವಸ್ಥಾನದಲ್ಲಿರುವ ಜನತೆಯ ಆಸೆ ಈಡೇರಿಕೆಗೆ ಸರ್ಕಾರ ಶ್ರಮಿಸುತ್ತದೆ ಎಂದು ಮೋದಿ ಹೇಳಿದ್ದಾರೆ.