ಮೇಘಾಲಯ ಮಹಿಳೆ ಹತ್ಯೆ: ವರದಿ ನೀಡುವಂತೆ ರಾಜ್ಯಕ್ಕೆ, ಕೇಂದ್ರ ಸೂಚನೆ
ಅತ್ಯಾಚಾರಕ್ಕೆ ಸಹಕರಿಸಲಿಲ್ಲ ಎಂದು ಮಹಿಳೆಯ ತಲೆಗೆ...
ನವದೆಹಲಿ: ಮೇಘಾಲಯ ಮಹಿಳೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಕೇಂದ್ರ ಗೃಹ ಸಚಿವಾಲಯ ಬುಧವಾರ ಸೂಚಿಸಿದೆ.
ಮೇಘಾಲಯದ ದಕ್ಷಿಣ ಗಾರೋ ಹಿಲ್ಸ್ ಜಿಲ್ಲೆಯಲ್ಲಿ ಗಾರೋ ನ್ಯಾಷನಲ್ ಲಿಬರೇಶನ್ ಆರ್ಮಿ(ಜಿಎನ್‌ಎನ್‌ಎ) ಉಗ್ರರು ನಿನ್ನೆ ಸಂಜೆ ಅತ್ಯಾಚಾರಕ್ಕೆ ಸಹಕರಿಸಲಿಲ್ಲ ಎಂದು ಮಹಿಳೆಯ ತಲೆಗೆ ಗುಂಡಿಟ್ಟು ಹತ್ಯೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆಯ ಸಂಪೂರ್ಣ ವರದಿ ನೀಡುವಂತೆ ರಾಜ್ಯಕ್ಕೆ ಕೇಂದ್ರ ಸರ್ಕಾರ ಸೂಚಿಸಿದೆ.
ನಿನ್ನೆ ಸಂಜೆ 6 ಗಂಟೆ ವೇಳೆಗೆ ಮಹಿಳೆಯ ಮನೆಗೆ ನುಗ್ಗಿದ ನಾಲ್ಕೈದು ಮಂದಿ ಶಸ್ತ್ರಧಾರಿ ಉಗ್ರರು ಪತಿ ಹಾಗೂ ಐವರು ಮಕ್ಕಳನ್ನು ಕೋಣೆಯೊಳಗೆ ಕೂಡಿ ಹಾಕಿ ಮಹಿಳೆಯನ್ನು ಹೊರಗೆಳೆದು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಈ ವೇಳೆ ಪ್ರತಿಭಟಿಸಿದ ಮಹಿಳೆಯ ತಲೆಗೆ ಸ್ವಯಂಚಾಲಿತ ಬಂದೂಕು ಇಟ್ಟು ಗುಂಡು ಹಾರಿಸಿ ಹತ್ಯೆ ಮಾಡಿದ್ದರು. ಗುಂಡೇಟಿನ ರಭಸಕ್ಕೆ ಮಹಿಳೆಯ ತಲೆ ಇಬ್ಭಾಗವಾಯಿತು ಎಂದು ಪೊಲೀಸರು ತಿಳಿಸಿದ್ದರು.