ಶಾರದಾ ಚಿಟ್ ಫಂಡ್ ಹಗರಣ: ಸಿಬಿಐನಿಂದ ಎಫ್ಐಆರ್ ದಾಖಲು
10 ಸಾವಿರ ಕೋಟಿ ಶಾರದಾ ಚಿಟ್ ಫಂಡ್ ಹಗರಣಕ್ಕೆ...
ಕೊಲ್ಕತಾ: 10 ಸಾವಿರ ಕೋಟಿ ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸದಂತೆ ಸಿಬಿಐ ಸುಮಾರು 46 ಎಫ್ಐಆರ್ಗಳನ್ನು ಬುಧವಾರ ದಾಖಲಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ರಾಜ್ಯಗಳು ಮತ್ತು ಇತರ ಸಂಸ್ಥೆಗಳ ವಿರುದ್ಧ ತನಿಖೆ ಕೈಗೊಂಡಿದ್ದ ಸಿಬಿಐನ 7 ಸದಸ್ಯರ ತಂಡ ವರದಿಗಳನ್ನು ಕಲೆಹಾಕಿದ್ದು, ಒಡಿಶಾದಲ್ಲಿ 43 ಹಾಗೂ ಪಶ್ಚಿಮ ಬಂಗಾಳದಲ್ಲಿ 3 ಎಫ್ಐಆರ್ಗಳನ್ನು ದಾಖಲಿಸಿದೆ.
ವರದಿ ಪ್ರಕಾರ, ಪ್ರಕರಣಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಕುನಾಲ್ ಗೋಷ್ ಅವರ ವಿರುದ್ಧ ಸಹ ಎಫ್ಐಆರ್ ದಾಖಲಾಗಿದೆ.
ವಂಚನೆ ಆರೋಪದಡಿ ಶಾರದಾ ಗ್ರೂಪ್ನ ಮುಖ್ಯಸ್ಥ ಸುದೀಪ್ತ ಸೇನ್ ಅವರನ್ನು ಪಶ್ಚಿಮ ಬಂಗಾಳ ಪೊಲೀಸರು ಕಳೆದ ವರ್ಷ ಕಾಶ್ಮೀರದಲ್ಲಿ ಬಂಧಿಸಿದ್ದರು. ಶಾರದಾ ಗ್ರೂಪ್ನ ಸಿಇಒ ಆಗಿದ್ದ ಕುನಾಲ್ ಕುಮಾರ್ ಗೋಷ್ ಅವರನ್ನು ಕಳೆದ ನವಂಬರ್ ತಿಂಗಳಲ್ಲಿ ಬಂಧಿಸಲಾಗಿತ್ತು.