ಆಫ್ಘಾನ್‌ನಲ್ಲಿ ಅಪಹರಣಕ್ಕೀಡಾದ ಭಾರತೀಯನಿರುವ ಸ್ಥಳ ಪತ್ತೆ
ಅಫ್ಘಾನಿಸ್ಥಾನದ ಹೆರಾತ್‌ನಲ್ಲಿ ಸೋಮವಾರ ಅಪಹರಣ...
ನವದೆಹಲಿ/ಕಾಬೂಲ್: ಅಫ್ಘಾನಿಸ್ಥಾನದ ಹೆರಾತ್‌ನಲ್ಲಿ ಸೋಮವಾರ ಅಪಹರಣವಾಗಿದ್ದ ತಮಿಳುನಾಡು ಮೂಲದ ಫಾದರ್ ಅಲೆಕ್ಸಿಸ್ ಪ್ರೇಮ್ ಕುಮಾರ್ ಅವರನ್ನು ಅಡಗಿಸಿಟ್ಟಿರುವ ಸ್ಥಳದ ಕುರಿತು ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ.
ಇದೇ ವೇಳೆ ಅಪಹರಣ ಪ್ರಕರಣಕ್ಕೆ ಸಂಬಂಧ 12 ಮಂದಿಯನ್ನು ಬುಧವಾರ ಬಂಧಿಸಲಾಗಿದೆ ಎಂದು ಆಫ್ಘಾನಿಸ್ತಾನದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ವಾಯುಪಡೆಯ ಮೂಲಕ ತೀವ್ರ ಶೋಧ ಕಾರ್ಯ ನಡೆಸಲಾಗುತ್ತಿದೆ. ವ್ಯಾಪಕ ಶೋಧ ನಡೆಯುತ್ತಿರುವುದು ತಿಳಿದ ಅಪಹರಣಕಾರರು ಪ್ರೇಮ್ ಕುಮಾರ್ ಅವರನ್ನು ಬೇರೆ ಗುಪ್ತ ಸ್ಥಳಕ್ಕೆ ಕರೆದೊಯ್ಯುವ ಸಾಧ್ಯತೆಗಳಿವೆ. ಈ ನಡುವೆ ಪ್ರೇಮ್ ಕುಮಾರ್ ಅಪಹರಣದ ಹಿನ್ನೆಲೆಯಲ್ಲಿ ಅವರು ಕಾರ್ಯನಿರ್ವಹಿಸುತ್ತಿದ್ದ ಎನ್‌ಜಿಒ ತನ್ನ ಸೇವೆಯನ್ನು ಸ್ಥಗತಿಗೊಳಿಸಿದೆ.
ಪ್ರೇಮ್ ಕುಮಾರ್ ಅಪಹರಣ: ಮಧ್ಯಪ್ರವೇಶಿಸುವಂತೆ ಪ್ರಧಾನಿಗೆ ಜಯಾ ಮನವಿ
ಅಫ್ಘಾನಿಸ್ತಾನದ ಹೆರಾತ್‌ನಲ್ಲಿ ಅಪಹರಣಕ್ಕೀಡಾದ ತಮಿಳುನಾಡು ಮೂಲದ ಫಾದರ್ ಅಲೆಕ್ಸಿಸ್ ಪ್ರೇಮ್ ಕುಮಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರವೇಶಿಸುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಮನವಿ ಮಾಡಿದ್ದಾರೆ.