ಎಎಪಿಗೆ ಅಂಜಲಿ ದಮಾನಿಯಾ ರಾಜಿನಾಮೆ
ಭ್ರಷ್ಟಚಾರ ವಿರೋಧಿ ಚಳುವಳಿಗಾರ್ತಿ, ಮಹಾರಾಷ್ಟ್ರದ ಆಮ್ ಆದ್ಮಿ ಪಕ್ಷದ ಹಿರಿಯ...
ಮುಂಬೈ: ಭ್ರಷ್ಟಚಾರ ವಿರೋಧಿ ಚಳುವಳಿಗಾರ್ತಿ, ಮಹಾರಾಷ್ಟ್ರದ ಆಮ್ ಆದ್ಮಿ ಪಕ್ಷದ ಹಿರಿಯ ನಾಯಕಿ ಅಂಜಲಿ ದಮಾನಿಯಾ ಅವರು ಎಎಪಿ ಪಕ್ಷಕ್ಕೆ ರಾಜಿನಾಮೆ ನೀಡಿದ್ದಾರೆ.
ತಮ್ಮ ರಾಜಿನಾಮೆ ಪತ್ರವನ್ನು ಸಹೋದ್ಯೋಗಿಗಳಿಗೆ ನೀಡಿರುವ ದಮಾನಿಯಾ, ರಾಜಿನಾಮೆ ಪತ್ರದಲ್ಲಿ ಪ್ರಿಯ ಸಹೋದ್ಯೋಗಿಗಳೇ ಭಾರವಾದ ಹೃದಯದಿಂದ ನಾನು ಎಎಪಿ ಜತೆಗಿನ ನಂಟನ್ನು ಕೊನೆಗೊಳಿಸುತ್ತಿದ್ದೇನೆ. ಆಮ್ ಆದ್ಮಿ ಪಕ್ಷದ ಹಿರಿಯಣ್ಣನಂತಿರುವ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಗ್ಗೆ ನನ್ನಲ್ಲಿ ಅಪಾರ ಗೌರವವಿದೆ.
ನನ್ನ ನಿರ್ಗಮದ ಹಿಂದೆ ಯಾವುದೇ ಪಿತ್ತೂರಿ ಈ ವಿಚಾರದಲ್ಲಿ ಯಾರು ಸಂಶಯದಿಂದ ನೋಡುವುದು ಬೇಡ ಎಂದು ತಿಳಿಸಿದ್ದಾರೆ. ಜತೆಗೆ ನನ್ನ ಖಾಸಗೀತನವನ್ನು ಗೌರವಿಸುವಂತೆ ಮಾಧ್ಯಮಗಳಲ್ಲಿ ನಾನು ಕೇಳಿಕೊಳ್ಳುತ್ತಿದ್ದೇನೆ ಎಂದು ಅಂಜಲಿ ದಮಾನಿಯಾ ರಾಜಿನಾಮೆ ಪತ್ರದಲ್ಲಿ ತಿಳಿಸಿದ್ದಾರೆ.