ಜೂನ್ 6ಕ್ಕೆ 'ಅಶ್ಲೀಲ ಕನ್ನಡಿ' ಹಾಗೂ 'ಭಾಮಿನಿ ಷಟ್ಪದಿ' ಬಿಡುಗಡೆ
ಬೆಂಗಳೂರು: ವಿ.ಆರ್.ಕಾರ್ಪೆಂಟರ್ ಅವರ 'ಅಶ್ಲೀಲ ಕನ್ನಡಿ' ಹಾಗೂ ಪತ್ರಕರ್ತೆ ಚೇತನಾ ತೀರ್ಥಹಳ್ಳಿ ಅವರ 'ಭಾಮಿನಿ ಷಟ್ಪದಿ'(ಪರಿಷ್ಕೃತ ಮುದ್ರಣ) ಪುಸ್ತಕಗಳು ಇದೇ ಜೂನ್ 6ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಹಿಂಭಾಗದಲ್ಲಿರುವ ಸಂಸ ಬಯಲು ರಂಗಮಂದಿರದಲ್ಲಿ ಬಿಡುಗಡೆಯಾಗುತ್ತಿವೆ.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಯು.ಆರ್.ಅನಂತಮೂರ್ತಿ ಅವರು ಈ ಎರಡು ಕೃತಿಗಳನ್ನು ಬಿಡುಗಡೆಗೊಳಿಸಲಿದ್ದಾರೆ. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಬಂಜಗೆರೆ ಜಯಪ್ರಕಾಶ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.