ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ನಿರ್ಭಿತಿಯಿಂದ ಕೆಲಸ ಮಾಡಿ, ನಿಮ್ಮ ರಕ್ಷಣೆಗೆ ನಾನಿದ್ದೇನೆ: ಅಧಿಕಾರಿಗಳಿಗೆ ಮೋದಿ ಅಭಯ

ನೀವು ನಿರ್ಭಿತಿಯಿಂದ ಕೆಲಸ ಮಾಡಿ. ನಿಮ್ಮ ರಕ್ಷಣೆಗೆ ನಾನು ಇದ್ದೇನೆ ಎಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳಿಗೆ...

Lingaraj Badiger
Updated On : 5 Jun 2014, 1:25 am

ನವದೆಹಲಿ: ನೀವು ನಿರ್ಭಿತಿಯಿಂದ ಕೆಲಸ ಮಾಡಿ. ನಿಮ್ಮ ರಕ್ಷಣೆಗೆ ನಾನು ಇದ್ದೇನೆ ಎಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಭಯ ನೀಡಿದ್ದಾರೆ.

ಪ್ರಮುಖ ವಿಷಯಗಳ ಕುರಿತು ಶೀಘ್ರ ನಿರ್ಧಾರ ತೆಗೆದುಕೊಳ್ಳುವ ಸಂಬಂಧ ನೀವು ಯಾವುದೇ ಸಮಯದಲ್ಲೂ ನನ್ನನ್ನು ಭೇಟಿ ಮಾಡಬಹುದು ಮತ್ತು ನಿಮ್ಮ ಬಳಿ ಯಾವುದೇ ವಿಷಯ ಇದ್ದರೂ ಅದನ್ನು ನನಗೆ ನೇರವಾಗಿ ತಿಳಿಸಿ, ಇಲ್ಲವೇ ಮೇಲ್ ಮಾಡಿ ಎಂದು ಮೋದಿ ಕೇಂದ್ರ ಸರ್ಕಾರದ ಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ.

ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 72ಕ್ಕು ಹೆಚ್ಚು ಕಾರ್ಯದರ್ಶಿಗಳೊಂದಿಗೆ ಮೊದಲ ಬಾರಿಗೆ ಮೋದಿ ಸಭೆ ನಡೆಸಿದರು. ಈ ವೇಳೆ ಹಿರಿಯ ಅಧಿಕಾರಿಗಳು ತಮ್ಮ ನಾಯಕತ್ವವನ್ನು ಗಭೀರವಾಗಿ ಪರಿಗಣಿಸಬೇಕು ಮತ್ತು ಉತ್ತಮ ಸರ್ಕಾರಕ್ಕಾಗಿ ಶೀಘ್ರ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ ಎನ್ನಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement