ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಮಹಿಳೆಯರ ಮೇಲಿನ ಲೈಂಗಿಕ ಹಿಂಸೆ ಮತ್ತು ಅತ್ಯಾಚಾರದ ವಿರುದ್ಧ ಆಂದೋಲನ

Lingaraj Badiger
Updated On : 5 Jun 2014, 12:49 pm

ಬೆಂಗಳೂರು: ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಖಂಡಿಸಿ ನಗರದ ಟೌನ್‌ಹಾಲ್ ಬಳಿ ಸಮಾನತಾ ಮಹಿಳಾ ವೇದಿಕೆ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು.

ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಸರಣಿ ಅತ್ಯಾಚಾರಗಳು, ಬೆಂಗಳೂರು ಸೇರಿದಂತೆ ಕನರ್ಾಟಕದ ವಿವಿಧೆಡೆ ನಡೆಯುತ್ತಿರುವ ಅತ್ಯಾಚಾರ ಹಾಗೂ ಲೈಂಗಿಕ ಹಲ್ಲೆಗಳ ಸ್ವರೂಪ ಮತ್ತು ವ್ಯಾಪಕತೆ ದಿನೇ ದಿನೇ ಹೆಚ್ಚುತ್ತಿರುವುದು ಅತ್ಯಂತ ಆತಂಕಕಾರಿಯಾಗಿದೆ. ಇದು ತನ್ನ ಸ್ವಾತಂತ್ರ್ಯವನ್ನು ಪಡೆದುಕೊಳ್ಳಲಿಚ್ಛಿಸುತ್ತಿರುವ ಮಹಿಳೆಯರು ಮತ್ತು ದಮನಿತ ಸಮುದಾಯಗಳ ಹಕ್ಕಿನ ಮೇಲೆ ನಡೆಯುತ್ತಿರುವ ಮಾರಣಾಂತಿಕ ಹಲ್ಲೆಯಾಗಿದೆ. ಇದನ್ನು ನಾವೆಲ್ಲರೂ ವಿರೋಧಿಸುತ್ತೇವೆ ಮತ್ತು ಮಹಿಳೆಯ ಸ್ವಾತಂತ್ರ್ಯ, ಘನತೆ ಹಾಗೂ ಸ್ವಾಭಿಮಾನವನ್ನು ಎತ್ತಿಹಿಡಿಯುವುದಾಗಿ ಸಮಾನತಾ ಮಹಿಳಾ ವೇದಿಕೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಅತ್ಯಾಚಾರಕ್ಕೊಳಗಾದ ಮಹಿಳೆಯನ್ನೇ ಗುರಿ ಮಾಡುವ ಮತ್ತು ಪರಿಹಾರ ಮಹಿಳೆಯನ್ನು ಮತ್ತಷ್ಟು ನಿರ್ಬಂಧಕ್ಕೊಳಪಡಿಸುವ ಸಮಾಜದ ಆಷಾಢಭೂತಿತನ ಮತ್ತು ಅಪ್ರಜಾತಾಂತ್ರಿಕತೆಯನ್ನೂ ನಾವು ಖಂಡಿಸುತ್ತೇವೆ. ಅತ್ಯಾಚಾರಕ್ಕೆ ಕಾರಣವಾಗುವ ಎಲ್ಲಾ ಆಯಾಮಗಳ ಕುರಿತು ಸಕರ್ಾರ ಹಾಗೂ ಸಮಾಜ ಗಮನ ಕೊಡಬೇಕೆಂದು ನಾವು ಒತ್ತಾಯಿಸುತ್ತೇವೆ.

ಈ ನಿಟ್ಟಿನಲ್ಲಿ ಒಂದು ದಿನದ ಪ್ರತಿಭಟನೆ ಮಾಡಿ ಹೋಗುವುದಿಲ್ಲ; ಬದಲಿಗೆ ಮಹಿಳೆಯರ ಮೇಲಿನ ಲೈಂಗಿಕ ಹಿಂಸೆ ಮತ್ತು ಅತ್ಯಾಚಾರದ ವಿರುದ್ಧ ಆಂದೋಲನ ಎನ್ನುವ ಹೆಸರಿನಲ್ಲಿ ನಿರಂತರವಾಗಿ ಚಟುವಟಿಕೆ ನಡೆಸಲು ಉದ್ದೇಶಿಸಿದ್ದೇವೆ. ನಾಡಿನ ಎಲ್ಲಾ ಪ್ರಜ್ಞಾವಂತರು ಇದರಲ್ಲಿ ಜೊತೆಗೂಡಬೇಕೆಂದು ಈ ಮೂಲಕ ಮನವಿ ಮಾಡಿದೆ

ಸದ್ಯದ ಸಹಭಾಗಿಗಳು: ಕನರ್ಾಟಕ ಜನಶಕ್ತಿ, ಸಮಾನತಾ ಮಹಿಳಾ ವೇದಿಕೆ, ದಲಿತ ಸಂಘರ್ಷ ಸಮಿತಿ ಮತ್ತು ಕನರ್ಾಟಕ ವಿದ್ಯಾಥರ್ಿ ಸಂಘಟನೆ ಹಾಗೂ ಇನ್ನೂ ಹಲವಾರು ಸಂಘಟನೆಗಳು.

ಸಂಪರ್ಕ: ಸಮಾನತಾ ಮಹಿಳಾ ವೇದಿಕೆ, ಎಂಸಿಟಿ ಲೇಔಟ್, ಮೈಸೂರು ರಸ್ತೆ, ಬೆಂಗಳೂರು. ಫೋ: 8971232329

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement