ಸುಮಿತ್ರ ಮಹಾಜನ್ 16ನೇ ಲೋಕಸಭೆ ಸ್ಪೀಕರ್
16ನೇ ಲೋಕಸಭೆಯ ಸ್ಪೀಕರ್ ಸ್ಥಾನ ಅಲಂಕರಿಸುವ ಭಾಗ್ಯ ಪುನಃ ಮಹಿಳಾ...
ನವದೆಹಲಿ: 16ನೇ ಲೋಕಸಭೆಯ ಸ್ಪೀಕರ್ ಸ್ಥಾನ ಅಲಂಕರಿಸುವ ಭಾಗ್ಯ ಪುನಃ ಮಹಿಳಾ ಅಭ್ಯರ್ಥಿಗೆ ಒಲಿದು ಬಂದಿದ್ದು, ಸಂಸದೆ ಸುಮಿತ್ರ ಮಹಾಜನ್ ಆಯ್ಕೆಯಾಗಲಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯ ನಾಯ್ಡು ಅವರು, ಸುಮಿತ್ರಾ ಮಹಾಜನ್ ಅವರು ಲೋಸಭೆಯ ಸ್ಪೀಕರ್ ಸ್ಥಾನ ಅಲಂಕರಿಸಲಿದ್ದಾರೆ ಎಂದರು.
ಮಹಾರಾಷ್ಟ್ರದ 71 ವರ್ಷದ ಸುಮಿತ್ರಾ ಅವರು ಅನುಭವಿ ಸಂಸದೀಯ ಪಟುವಾಗಿದ್ದಾರೆ. ಹೀಗಾಗಿ ಅವರು ಆಯ್ಕೆಗೆ ಖುದ್ದು ಬಿಜೆಪಿ ರಾಷ್ಟ್ರದ್ಯಕ್ಷ ರಾಜ್‌ನಾಥ್ ಸಿಂಗ್ ಅವರು ಒಲವು ತೋರಿದ್ದರು.
ಸುಮಿತ್ರಾ ಮಹಾಜನ್ ಅವರು ಮೀರಾ ಕುಮಾರ್ ಬಳಿಕ ಸ್ಪೀಕರ್ ಸ್ಥಾನ ಅಲಂಕರಿಸಲಿರುವ 2ನೇ ಮಹಿಳೆ ಎನ್ನಿಸಿಕೊಳ್ಳಲಿದ್ದಾರೆ.
1989ರಿಂದ ಸತತವಾಗಿ ಜಯಿಸಿರುವ ಸುಮಿತ್ರಾ ಒಟ್ಟು 8 ಬಾರಿ ಕೆಳಮನೆ ಪ್ರವೇಶಿಸಿದ್ದಾರೆ. ಇತ್ತೀಚೆಗೆ ಇಂದೋರ್ ಕ್ಷೇತ್ರದಿಂದ ಅವರು 4.67ಲಕ್ಷ ಮತಗಳ ಭಾರಿ ಅಂತರದಿಂದ ಗೆಲುವು ಸಾಧಿಸಿದ್ದರು. 1999ರ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಆಡಳಿತದಲ್ಲಿ ರಾಜ್ಯ ಸಚಿವೆಯಾಗಿ ಕಾರ್ಯನಿರ್ವಹಿಸಿದ್ದರು.