ಅಮೃತ್‌ಸರ್‌ನ ಸ್ವರ್ಣಮಂದಿರದಲ್ಲಿ ಗುಂಪುಘರ್ಷಣೆ: 13 ಮಂದಿಗೆ ಗಾಯ
ಸಿನಿಮಾ ಶೈಲಿಯಲ್ಲಿ ಸಿಖ್...
ಅಮೃತ್‌ಸರ: ಸಿನಿಮಾ ಶೈಲಿಯಲ್ಲಿ ಸಿಖ್ ಸಂಘಟನೆಗಳು ಬಡಿದಾಟಕ್ಕಿಳಿದಿರುವ ಘಟನೆ ಪಂಜಾಬ್‌ನ ಅಮೃತಸರದಲ್ಲಿರುವ ಸ್ವರ್ಣಮಂದಿರದಲ್ಲಿ ಶುಕ್ರವಾರ ನಡೆದಿದೆ.
ಅಪರೇಷನ್ ಬ್ಲೂಸ್ಟಾರ್ ನಡೆದು ಇಂದಿಗೆ 30 ತುಂಬಿದ ಹಿನ್ನಲೆಯಲ್ಲಿ ವರ್ಷಾಚರಣೆ ಮಾಡಲಾಗುತ್ತಿತ್ತು. ಬ್ಲೂ ಸ್ಟಾರ್‌ನಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಭೆ ನಡೆಸಲಾಗುತ್ತಿತ್ತು. ಈ ವೇಳೆ ನಾಯಕರು ಮಾತನಾಡುವ ವಿಚಾರದಲ್ಲಿ ಮಾರಾಮಾರಿ ಉಂಟಾಗಿದೆ. ಎರಡು ಸಿಖ್ ಗುಂಪುಗಳ ನಡುವೆ ವಾಗ್ವಾದ ಉಂಟಾಗಿದ್ದು, ಬಡಿದಾಟಕ್ಕೆ ತಿರುಗಿದೆ.
ದೇವಾಲಯದ ಆವರಣದಲ್ಲೇ ಅಕಾಲಿದಳ ಮತ್ತು ಎಸ್‌ಜಿಪಿಸಿ ಗುಂಪುಗಳ ನಡುವೆ ಘರ್ಷಣೆ ಉಂಟಾಗಿದ್ದು, ತಲವಾರು, ಈಟಿ, ದೊಣ್ಣೆ, ಕತ್ತಿಗಳಿಂದ ಬಡಿದಾಡಿದ್ದಾರೆ. ಘಟನೆಯಲ್ಲಿ 12ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ.