ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಐಎಸ್‌ಐ ವಿರುದ್ಧ ಜಿಯೋ ನ್ಯೂಸ್ ಮಾನನಷ್ಟ ಮೊಕದ್ದಮೆ

Vishwanath S
Updated On : 6 Jun 2014, 7:52 am

ಇಸ್ಲಾಮಾಬಾದ್: ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ವಿರುದ್ಧ ಪಾಕಿಸ್ತಾನದ ಟೆಲಿವಿಷನ್ ಚಾನೆಲ್ ಜಿಯೋ ನ್ಯೂಸ್ ಮಾನನಷ್ಟ ಮೊಕದ್ದಮೆಯನ್ನು ಶುಕ್ರವಾರ ದಾಖಲಿಸಿದೆ.

ಜಿಯೋ ನ್ಯೂಸ್ ರಾಷ್ಟ್ರ ವಿರೋಧಿ ಎಂಬ ಆರೋಪಗಳ ವಿರುದ್ಧ ಅದು ಮಾನನಷ್ಟ ಮೊಕದ್ದಮೆ ಹೂಡಿದ್ದು, ಮಿಲಿಟರಿಯನ್ನು ಬಹಿರಂಗವಾಗಿ ಟೀಕಿಸುವುದನ್ನು ನಿಷೇಧಿಸಿರುವ ಪಾಕಿಸ್ತಾನದಲ್ಲಿ ಇದು ಅಭೂತಪೂರ್ವ ಘಟನೆಗೆ ಇದು ಸಾಕ್ಷಿಯಾಗಿದೆ.

ಐಎಸ್‌ಐ ವಿರುದ್ಧ ಮೊಕದ್ದಮೆ ಹೂಡಿರುವ ಜಿಯೋ ನ್ಯೂಸ್ ಚಾನೆಲ್ ಪ್ರಸಾರವನ್ನು ಪಾಕಿಸ್ತಾನದ ಮಾಧ್ಯಮ ನಿಯಂತ್ರಕ 15 ದಿನಗಳ ಕಾಲ ಸ್ಧಗಿತಗೊಳಿಸುವ ಆದೇಶ ನೀಡಿದೆ. ಈ ನಡುವೆ ಪೆಮ್ರಾ ಮಾಧ್ಯಮ ನಿಯಂತ್ರಕ ಜಿಯೋ ಸುದ್ದಿವಾಹಿನಿ ಪ್ರಸಾರವನ್ನು 15 ದಿನಗಳ ಕಾಲ ಸ್ಥಗಿತಗೊಳಿಸಿದ್ದು, 101, 500 ಡಾಲರ್ ದಂಡವನ್ನು ವಿಧಿಸಿದೆ.

ಮತ್ತೊಂದೆಡೆ ಖಾಸಗಿ ಮಾಲೀಕತ್ವದ ಜಾಂಗ್ ಗ್ರೂಪ್ ಭಾಗವಾದ ಜಿಯೋ ನ್ಯೂಸ್ ಸಹ ಐಎಸ್‌ಐಗೆ ಸಾರ್ವಜನಿಕವಾಗಿ ಕ್ಷಮಾಪಣೆ ಕೋರುವಂತೆ 14 ದಿನಗಳ ಗಡುವು ನೀಡಿದೆ.

ಜಿಯೋ ಗ್ರೂಪ್‌ನ 8000 ಹೆಚ್ಚು ಪತ್ರಕರ್ತರಿಗೆ, ವೃತ್ತಿಪರರಿಗೆ ಮತ್ತು ಅವರ ಕುಟುಂಬಗಳಿಗೆ ಕಿರುಕುಳ ನೀಡಲಾಗುತ್ತಿದ್ದು, ಅವರ ಮೇಲೆ ದಾಳಿ ಮಾಡಿ ಚಿತ್ರಹಿಂಸೆಗೆ ಗುರಿಪಡಿಸಲಾಗುತ್ತಿದೆ ಎಂದು ಜಿಯೋ ನ್ಯೂಸ್‌ನ ಆರೋಪವಾಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement