ಕೇರಳಕ್ಕೆ ಮುಂಗಾರು ಪ್ರವೇಶ
ನಿಗದಿಗಿಂತ ಐದು ದಿನ ತಡವಾಗಿ ಮುಂಗಾರು ಮಳೆ ಕೇರಳ ಪ್ರವೇಶ ಮಾಡಿದೆ
ನವದೆಹಲಿ: ನಿಗದಿಗಿಂತ ಐದು ದಿನ ತಡವಾಗಿ ಮುಂಗಾರು ಮಳೆ ಕೇರಳ ಪ್ರವೇಶ ಮಾಡಿದೆ ಎಂದು ಭಾರತೀಯ ಹವಾಮಾನ ಇಲಾಖೆ ಶುಕ್ರವಾರ ಸ್ಪಷ್ಟಪಡಿಸಿದೆ.
ಕೇರಳಕ್ಕೆ ಮುಂಗಾರು ಪ್ರವೇಶ ಮಾಡಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಹಾ ನಿರ್ದೇಶಕ ಎಲ್.ಎಸ್. ರಾಥೋರ್ ಅವರು ಹೇಳಿದ್ದಾರೆ.
ಮುಂಗಾರು ಮಳೆ ಸಾಮಾನ್ಯವಾಗಿ ಜೂನ್ 1ರಂದು ಕೇರಳ ಪ್ರವೇಶ ಮಾಡುತ್ತದೆ. ಆದರೆ ಈ ಬಾರಿ ತಡವಾಗಿ ಪ್ರವೇಶ ಮಾಡುತ್ತಿದೆ ಎಂದು ರಾಥೋರ್ ತಿಳಿಸಿದ್ದಾರೆ.
ಕೇರಳದಿಂದ ಅರೇಬಿಯನ್ ಸಮುದ್ರದ ದಕ್ಷಿಣ ಭಾಗ, ಮಾಲ್ಡೀವ್ಸ್-ಕೊಮೊರಿನ್ ಪ್ರದೇಶ, ತಮಿಳುನಾಡು, ಬಂಗಾಳ ಕೊಲ್ಲಿ ಕಡೆ ಮುಂಗಾರು ಸಾಗಲಿದೆ. ಇನ್ನೆರಡು ದಿನಗಳಲ್ಲಿ ಕರ್ನಾಟಕಕ್ಕೂ ಮುಂಗಾರು ಮಾರುತ ಬರಲಿದೆ. ಶನಿವಾರದ ಒಳಗೆ ಅಂದರೆ, 24 ಗಂಟೆಗಳಲ್ಲಿ ಈಶಾನ್ಯ ರಾಜ್ಯಗಳಲ್ಲೂ ಮಳೆ ಕಾಣಿಸಿಕೊಳ್ಳಲಿದೆ.