'ಮಳೆ ಮಾರುವ ಹುಡುಗ' ಕಥಾಸಂಕಲನಕ್ಕೆ ಪ್ರಶಸ್ತಿ
ಬೆಂಗಳೂರು: "ಸ್ವಸ್ತಿ ಪ್ರಕಾಶನ" ವು 2014 ನೇ ಸಾಲಿನ "ಕಥಾಸಂಕಲನ" ಪ್ರಶಸ್ತಿ ಪ್ರಕಟಿಸಿದೆ.
ಮಾರ್ಚ ತಿಂಗಳಿನಲ್ಲಿ ನಡೆಸಿದ ಈ ಕಥಾಸಂಕಲನ ಸ್ಪರ್ಧೆಗೆ ನಾಡಿನಾದ್ಯಂತ ಸುಮಾರು 20 ಕಥಾಸಂಕಲನಗಳು ಆಗಮಿಸಿದ್ದು, ಅದರಲ್ಲಿ 6 ಕಥಾಸಂಕಲನಗಳು ಕೊನೆಯಸುತ್ತಿಗೆ ಆಯ್ಕೆಗೊಂಡಿದ್ದವು.
ಪ್ರತಿ ಸಂಕಲನವು 10 ಕತೆಗಳನ್ನು ಒಳಗೊಂಡಿದೆ. ಖ್ಯಾತ ಕಥೆಗಾರರು, ಸಂವೇದನಾಶೀಲ ಬರಹಗಾರರೂ ಆದ ಡಾ. ಶ್ರೀಧರ್ ಬಳಗಾರ್ ಅವರು ಈ ಸ್ಪರ್ಧೆಯ ನಿರ್ಣಯಕರಾಗಿದ್ದು, ಈ ಸಾಲಿನ ಪ್ರಶಸ್ತಿ ಕರ್ಕಿ ಕೃಷ್ಣಮೂರ್ತಿಯವರ "ಮಳೆ ಮಾರುವ ಹುಡುಗ" ಕಥಾಸಂಕಲನಕ್ಕೆ ಲಭಿಸಿರುತ್ತದೆ.