ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಅಸ್ಸಾಂ ಎಸ್ಪಿ ಹತ್ಯೆ ಪ್ರಕರಣ: 4 ಸಿಬ್ಬಂದಿ ಅಮಾನತು

ಉಗ್ರರ ವಿರುದ್ಧ ಕಾರ್ಯಾಚರಣೆ ವೇಳೆ ಎಸ್ಪಿ ನಿತ್ಯಾನಂದ...

Vishwanath S
Updated On : 7 Jun 2014, 3:33 am

ಗುವಾಹಾಟಿ: ಉಗ್ರರ ವಿರುದ್ಧದ ಕಾರ್ಯಾಚರಣೆ ವೇಳೆ ಎಸ್ಪಿ ನಿತ್ಯಾನಂದ ಗೋಸ್ವಾಮಿ ಅವರನ್ನು ಒಂಟಿಯಾಗಿ ಬಿಟ್ಟು ಬಂದ ಆರೋಪದಡಿ ನಾಲ್ವರು ಪೊಲೀಸರನ್ನು ಶನಿವಾರ ಅಮಾನತು ಮಾಡಲಾಗಿದೆ.

ನಿನ್ನೆ ಕಾರ್ಬಿ ಆಂಗ್‌ಲಾಂಗ್ ಜಿಲ್ಲೆಯಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಕಾರ್ಬಿ ಪೀಪಲ್ಸ್ ಲಿಬರೇಷನ್ ಟೈಗರ್ಸ್(ಕೆಪಿಎಲ್‌ಟಿ) ಉಗ್ರರ ಗುಂಡೇಟಿಗೆ 58 ವರ್ಷದ ಎಸ್‌ಪಿ ನಿತ್ಯಾನಂದ ಗೋಸ್ವಾಮಿ ಅವರು ಬಲಿಯಾಗಿದ್ದು, ಎಸ್ಪಿ ಗೋಸ್ವಾಮಿ ಅವರನ್ನು ಒಂಟಿಯಾಗಿ ಬಿಟ್ಟು ಹೋಗಿದ್ದ ನಾಲ್ವರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.

ಕಾರ್ಬಿ ಪೀಪಲ್ಸ್ ಲಿಬರೇಷನ್ ಟೈಗರ್ಸ್(ಕೆಪಿಎಲ್‌ಟಿ) ಉಗ್ರರು ಕಾರ್ಬಿ ಆಂಗ್ಲೊಂಗ್ನ ರೊಂಗ್ತೋಂಗ್ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಪೊಲೀಸ್ ಪಡೆ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ಸುಮಾರು 30 ಮಂದಿ ಉಗ್ರರನ್ನು ನಿತ್ಯಾನಂದ ಗೋಸ್ವಾಮಿ ಅವರು ಓಡಿಸಿಕೊಂಡು ಹೋಗಿದ್ದರು. ಅವರ ತಂಡದಲ್ಲಿ ನಾಲ್ವರು ಸಿಬ್ಬಂದಿ ಅವರನ್ನು ಒಂಟಿಯಾಗಿ ಬಿಟ್ಟು ಬಾಹ್ಯ ರಕ್ಷಣಾ ಠಾಣೆಗೆ ಮರಳಿ ಘಟನೆಯ ಬಗ್ಗೆ ವಿವರ ನೀಡಿದ್ದರು. ಎಸ್‌ಪಿ ಸಾವಿನ ಬಗ್ಗೆ ಅಸ್ಸಾಂ ಸರ್ಕಾರಕ್ಕೆ ವರದಿ ಒಪ್ಪಿಸುಂತೆ ಗೃಹ ಸಚಿವರು ಆದೇಶಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement