ಕಡತ ಪರಿಶೀಲನೆ 4 ಹಂತ ದಾಟಬಾರದು: ಸಂಪುಟ ಕಾರ್ಯದರ್ಶಿ
ಯಾವುದೇ ಕಡತಗಳನ್ನು 4 ಹಂತಗಳಿಗಿಂತ ಹೆಚ್ಚು ಪರಿಶೀಲನೆ ಮಾಡಬಾರದು ಎಂದು...
ನವದೆಹಲಿ: ಯಾವುದೇ ಕಡತಗಳನ್ನು 4 ಹಂತಗಳಿಗಿಂತ ಹೆಚ್ಚು ಪರಿಶೀಲನೆ ಮಾಡಬಾರದು ಎಂದು ಕೇಂದ್ರ ಸಂಪುಟ ಕಾರ್ಯದರ್ಶಿಗಳು ಶನಿವಾರ ಸೂಚಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸರ್ಕಾರ ಇಲಾಖೆಗಳಲ್ಲಿ ಕಡತಗಳನ್ನು ಒಬ್ಬರಿಂದ ಒಬ್ಬರಿಗೆ ರವಾನಿಸುತ್ತಾ, ಕೇವಲ ಪರಿಶೀಲನೆಯಲ್ಲಿ ಸಮಯ ವ್ಯರ್ಥ ಮಾಡಲಾಗುತ್ತಿದ್ದು, ಇದರಿಂದ ಸರ್ಕಾರದ ಸಮಯ ಹಾಳಾಗುತ್ತಿದೆ.
ಕಡತಗಳ ಪರಿಶೀಲನೆ ನಿಧಾನಗತಿಯಲ್ಲಿ ಸಾಗಿದರೆ ಸಾರ್ವಜನಿಕರಿಗೂ ತೊಂದರೆ ಯಾಗುತ್ತಿರುವ ಹಿನ್ನಲೆಯಲ್ಲಿ ಸಂಪುಟದ ಕಾರ್ಯದರ್ಶಿ ಕೇಂದ್ರ ಸರ್ಕಾರದ ಇಲಾಖೆಗಳಿಗೆ ಸೂಚಿಸಿದ್ದಾರೆ.
ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ಸರ್ಕಾರಿ ಇಲಾಖೆಗಳ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಿದ್ದು, ಕಾರ್ಯದರ್ಶಿಗಳಿಗೆ ವಿಶೇಷ ಸೂಚನೆ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಕೇಂದ್ರ ಸಂಪುಟ ಕಾರ್ಯದರ್ಶಿ ಅಜಿತ್ ಸೇಥಿ ಅವರು ಇನ್ನು ಮುಂದೆ ಸರ್ಕಾರಿ ಇಲಾಖೆಗಳಲ್ಲಿ ಯಾವುದೇ ಕಡತ ಪರಿಶೀಲನೆ 4ಕ್ಕೂ ಹೆಚ್ಚು ಬಾರಿ ನಡೆಯಬಾರದು ಎಂದು ಆದೇಶಿಸಿದ್ದಾರೆ.