ಕಾಂಗ್ರೆಸ್ಗೆ ಎಸ್.ಎಂ. ಕೃಷ್ಣ ಗುಡ್ಬೈ?
ಮಾಜಿ ಕೇಂದ್ರ ಸಚಿವ ಎಸ್.ಎಂ. ಕೃಷ್ಣ ಅವರಿಗೆ ರಾಜ್ಯಸಭೆ ಟಿಕೇಟ್ ನೀಡದೆ ಪ್ರೋ. ರಾಜೀವ್ಗೌಡ ಅವರಿಗೆ ಕಾಂಗ್ರೆಸ್ ಮಣೆಯಾಗುತ್ತಿರುವುದಕ್ಕೆ...
ನವದೆಹಲಿ: ಮಾಜಿ ಕೇಂದ್ರ ಸಚಿವ ಎಸ್.ಎಂ. ಕೃಷ್ಣ ಅವರಿಗೆ ರಾಜ್ಯಸಭೆ ಟಿಕೇಟ್ ನೀಡದೆ ಪ್ರೋ. ರಾಜೀವ್ಗೌಡ ಅವರಿಗೆ ಕಾಂಗ್ರೆಸ್ ಮಣೆಯಾಗುತ್ತಿರುವುದಕ್ಕೆ ಬೇಸರಗೊಂಡು ಕೃಷ್ಣ ಅವರು ಕಾಂಗ್ರೆಸ್ಗೆ ರಾಜಿನಾಮೆ ನೀಡುವ ಸಾಧ್ಯತೆ ಇದೆ.
ರಾಜ್ಯಸಭೆ ಚನಾವಣೆಗೆ ಎಐಸಿಸಿ ಪ್ರಧಾನಿ ಕಾರ್ಯದರ್ಶಿ ಬಿ.ಕೆ. ಹರಿಪ್ರಸಾದ್ ಹಾಗೂ ಎಐಸಿಸಿ ವಕ್ತಾರರಾಗಿರುವ ಪ್ರೋ. ರಾಜೀವ್ಗೌಡ ಅವರಿಗೆ ಕಾಂಗ್ರೆಸ್ ಟಿಕೇಟ್ ನೀಡಿದೆ ಎಂಬ ಮಾಹಿತಿ ಎಐಸಿಸಿ ಮೂಲಗಳಿಂದ ತಿಳಿದುಬಂದಿದೆ.
ಮೊದಲಿಗೆ ರಾಜ್ಯಸಭೆ ಚುನಾವಣೆಗೆ ಎಸ್.ಎಂ. ಕೃಷ್ಣ ಹಾಗೂ ಎಐಸಿಸಿ ಪ್ರಧಾನಿ ಕಾರ್ಯದರ್ಶಿ ಬಿ.ಕೆ. ಹರಿಪ್ರಸಾದ್ ಅವರನ್ನು ಕಾಂಗ್ರೆಸ್ ಆಯ್ಕೆ ಮಾಡಿತ್ತು. ಇದೀಗ ಹರಿಪ್ರಸಾದ್ ಅವರನ್ನು ಆಯ್ಕೆ ಮಾಡಿರುವ ಕಾಂಗ್ರೆಸ್ ಎಸ್.ಎಂ. ಕೃಷ್ಣ ಅವರ ಬದಲಿಗೆ ಎಐಸಿಸಿ ವಕ್ತಾರರಾಗಿರುವ ರಾಜೀವ್ಗೌಡ ಅವರಿಗೆ ರಾಜ್ಯಸಭೆ ಟಿಕೇಟ್ ನೀಡುತ್ತಿರುವುದರಿಂದ ಬೇಸರಗೊಂಡು ಕಾಂಗ್ರೆಸ್ನ ಪ್ರಾಥಮಿಕ ಸದಸ್ಯತ್ವಕ್ಕೂ ಎಸ್.ಎಂ ಕೃಷ್ಣ ರಾಜಿನಾಮೆ ನೀಡುವ ಸಾಧ್ಯತೆ ಇದೆ.