ಕೂಡಂಕುಳಂ ವಿದ್ಯುತ್ ಸ್ಥಾವರದಲ್ಲಿ 1 ಸಾವಿರ ಮೆ.ವ್ಯಾ ಉತ್ಪಾದನೆ
ಚೆನ್ನೈ: ಕೂಡಂಕುಳಂ ಪರಮಾಣು ವಿದ್ಯುತ್ ಸ್ಥಾವರದ ಒಂದನೇ ಯೂನಿಟ್ನಲ್ಲಿ 1 ಸಾವಿರ ಮೆವ್ಯಾ ವಿದ್ಯುತ್ಯನ್ನು ಉತ್ಪಾದಿಸುವ ಮೂಲಕ ಶನಿವಾರ ದಾಖಲೆ ನಿರ್ಮಿಸಿದೆ.
ಕೂಡಂಕುಳ ಪರಮಾಣು ವಿದ್ಯುತ್ ಸ್ಥಾವರದ 1ನೇ ಯೂನಿಟ್ನ ಗರಿಷ್ಠ ಸಾಮರ್ಥ್ಯ 1 ಸಾವಿರ ಮೆವ್ಯಾ ಆಗಿದ್ದು, ಇಂದು ಸಾವಿರ ಮೆವ್ಯಾ ವಿದ್ಯುತ್ ಉತ್ಪಾದಿಸುವ ಮೂಲಕ ದೇಶದ ಮೊದಲ ಪರಮಾಣು ಸ್ಥಾವರ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.
ಇಂದು ಮಧ್ಯಾಹ್ನ 1.20ಕ್ಕೆ ಸರಿಯಾಗಿ ಸ್ಥಾವರದ 1ನೇ ಯೂನಿಟ್ ಭರ್ತಿ 1 ಸಾವಿರ ಮೆವ್ಯಾ ಸಾಮಥ್ಯ ತಲುಪಿತ್ತು. ಇಡೀ ದಿನದಲ್ಲಿ 1 ಸಾವಿರ ಮೆವ್ಯಾ ವಿದ್ಯುತ್ ಉತ್ಪಾದಿಸುವ ಶಕ್ತಿ ಇದಕ್ಕಿದೆ. ಆದರೆ ಅಣುಶಕ್ತಿ ನಿಯಂತ್ರಣ ಮಂಡಳಿಯ ನಿಯಮಕ್ಕೆ ಬದ್ಧವಾಗಿ ಶೀಘ್ರದಲ್ಲೇ ಸಾಮಥ್ಯವನ್ನು 900 ಮೆವ್ಯಾಗೆ ಇಳಿಸಲಾಗುವುದು ಎಂದು ಸ್ಥಾವರದ ನಿದೇಶಕ ಆರ್.ಎಸ್. ಸುಂದರ್ ತಿಳಿಸಿದ್ದಾರೆ.
ರಷ್ಯಾದ ವೊಡಾ ವೊಡಾ ಎನರ್ಜೊ ರಿಯಾಕ್ಟರ್ ವಿನ್ಯಾಸ ಮಾಡಿದ ಈ ಸ್ಥಾವರ ಕಾರ್ಯಾರಂಭ ಮಾಡಿ ಮುಖ್ಯ ಗ್ರಿಡ್ಗೆ ಸಂಪರ್ಕ ಕಲ್ಪಿಸಿದ ಎಂಟು ತಿಂಗಳಲ್ಲೆ ಯಶಸ್ವಿಯಾಗಿದೆ.