ಯೋಗೇಂದ್ರ ನನ್ನ ಆತ್ಮೀಯ ಗೆಳೆಯ: ಕೇಜ್ರಿವಾಲ್
ಎಎಪಿ ಹಿರಿಯ ಮುಖಂಡ ಯೋಗೇಂದ್ರ ಯಾದವ್ ನನಗೆ ಆತ್ಮೀಯ ಗೆಳೆಯ...
ನವದೆಹಲಿ: ಎಎಪಿ ಹಿರಿಯ ಮುಖಂಡ ಯೋಗೇಂದ್ರ ಯಾದವ್ ನನಗೆ ಆತ್ಮೀಯ ಗೆಳೆಯ ಹಾಗೂ ಮೌಲ್ಯಯುತ ಸಹೋದ್ಯೋಗಿ ಎಂದು ಎಎಪಿ ಮುಖ್ಯಸ್ಥ ಹಾಗೂ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಎಂದು ಹೇಳಿದ್ದಾರೆ.
ಯೋಗೇಂದ್ರ ಯಾದವ್ ನನ್ನ ಆತ್ಮೀಯ ಗೆಳೆಯ ಮೌಲ್ಯಯುತ ಸಹೋದ್ಯೋಗಿ ಎಂದು ಟ್ವೀಟಿಸಿರುವ ಅರವಿಂದ್ ಕೇಜ್ರಿವಾಲ್, ಯೋಗೇಂದ್ರ ಅವರೊಂದಿಗೆ ಕೆಲಸ ಮಾಡುವಾಗ ಹಲವಾರು ಗಂಭೀರ ಸಮಸ್ಯೆಗಳ ಕುರಿತು ಧ್ವನಿಯೇತುತ್ತಿದ್ದರು ಎಂದರು.
ಆಮ್ ಆದ್ಮಿ ಪಕ್ಷದ ಸಂಸ್ಥಾಪಕಿ ಸದಸ್ಯೆ ಶಾಜಿಯಾ ಇಲ್ಮಿ ಅವರು ಎಎಪಿ ಕೆಲವೊಂದು ತಪ್ಪುಗಳನ್ನು ಮಾಡಿದೆ ಎಂದು ಆರೋಪಿಸಿ ಕಳೆದ ಮೇ 24 ರಂದು ರಾಜಿನಾಮೆ ನೀಡಿದ್ದರು. ಹೀಗಾಗಿ ಶಾಜಿಯಾ ಇಲ್ಮಿ ಅವರನ್ನು ಮತ್ತೆ ಪಕ್ಷಕ್ಕೆ ಕರೆ ತರಲು ಯತ್ನಿಸುತ್ತಿದೆ ಎಂದರು.
ಇಂದು ದೆಹಲಿಯ ಎಎಪಿ ಕಚೇರಿಯಲ್ಲಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಪಕ್ಷದ ಮುಖಂಡರಾದ ಪ್ರಶಾಂತ್ ಭೂಷಣ್, ಅರವಿಂದ್ ಕೇಜ್ರಿವಾಲ್, ಯೋಗೇಂದ್ರ ಯಾದವ್, ಮನೀಶ್ ಸಿಸೋಡಿಯಾ ಮತ್ತು ಜೈಹಿಂದ್ ಅವರು ಭಾಗವಹಿಸಿ ಪಕ್ಷವನ್ನು ಸಂಘಟಿಸುವ ಕುರಿತಾಗಿ ಚರ್ಚೆಗಳನ್ನು ನಡೆಸಲಿದ್ದಾರೆ.