ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಮೋದಿ ಪ್ರಧಾನಿಯಾದ ಬಳಿಕ ದೇಶದಲ್ಲಿ ಕೋಮುಗಲಭೆ ಹೆಚ್ಚಾಗಿವೆ: ಪವಾರ್

ನರೇಂದ್ರ ಮೋದಿ ಅವರು...

Vishwanath S
Updated On : 8 Jun 2014, 6:51 am

ನವದೆಹಲಿ: ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾದ ಬಳಿಕ ದೇಶದಲ್ಲಿ ಕೋಮುಗಲಭೆಗಳು ಹೆಚ್ಚಾಗಿವೆ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಭಾನುವಾರ ಆರೋಪಿಸಿದ್ದಾರೆ.

ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಟೆಕ್ಕಿ ಕೊಲೆ ಪ್ರಕರಣವನ್ನು ಮುಂದಿಟ್ಟುಕೊಂಡು ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿರುವ ಶರದ್ ಪವಾರ್, ಮೋದಿ ಪ್ರಧಾನಿಯಾದ ಬಳಿಕ ದೇಶದಲ್ಲಿ ಕೋಮುಶಕ್ತಿಗಳ ಪ್ರಭಾವ ಹೆಚ್ಚಾಗುತ್ತಿದ್ದು, ಇಂಥಹ ಘಟನೆಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ.

ಇದು ಹೀಗೆ ಮುಂದುವರೆದರೆ ಕೋಮುಶಕ್ತಿಗಳ ಉಪಟಳ ಹೆಚ್ಚಾಗಿ ದೇಶದಲ್ಲಿ ಮತ್ತಷ್ಟು ಮಂದಿ ಕೋಮುಗಲಭೆಗೆ ಬಲಿಯಾಗಬೇಕಾಗುತ್ತದೆ. ಹೀಗಾಗಿ ಕೋಮುಶಕ್ತಿಗಳ ವಿರುದ್ಧ ಸಮರ್ಥವಾಗಿ ಹೋರಾಡುವ ಅವಶ್ಯಕತೆ ಇದೆ ಎಂದರು.

ಮರಾಠ ನಾಯಕ ಶಿವಾಜಿ ಮತ್ತು ಶಿವಸೇನಾ ನಾಯಕ ಬಾಳಾಠಾಕ್ರೆ ಅವರ ಅವಹೇಳನಕಾರಿ ಫೋಟೋಗಳನ್ನು ಫೇಸ್‌ಬುಕ್‌ಗೆ ಅಪ್‌ಲೋಡ್‌ ಮಾಡಿದ ಸೊಲ್ಲಾಪುರ ಮೂಲದವನಾದ  ಶೇಖ್‌ ಮೊಹ್ಸಿನ್‌ ಸಾದಿಕ್‌ನನ್ನು ಹಿಂದೂರಾಷ್ಟ್ರ ಸೇನಾ ಸಂಘಟನೆಯ ಯುವಕರು ಸೋಮವಾರ ಹತ್ಯೆ ಮಾಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement