ರಾಜ್ಯಸಭೆ ವಿಪಕ್ಷ ನಾಯಕನಾಗಿ ಗುಲಾಂನಬಿ ಆಜಾದ್ ನೇಮಕ
ನವದೆಹಲಿ: ರಾಜ್ಯಸಭೆ ವಿಪಕ್ಷ ನಾಯಕನಾಗಿ ಕಾಂಗ್ರೆಸ್ ಹಿರಿಯ ಮುಖಂಡ ಗುಲಾಂ ನಬಿ ಆಜಾದ್ ಅವರನ್ನು ಕಾಂಗ್ರೆಸ್ ನೇಮಿಸಿದೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಮುಖಂಡ ಜನಾರ್ದನ ದ್ವಿವೇದಿ, ಪಕ್ಷದ ಹಿರಿಯ ಮುಖಂಡನಾಗಿರುವ ಗುಲಾಂನಬಿ ಆಜಾದ್ ಅವರನ್ನು ರಾಜ್ಯಸಭೆಯ ವಿಪಕ್ಷ ನಾಯಕನಾಗಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ನೇಮಕ ಮಾಡಿದ್ದಾರೆ ಎಂದರು.