ಬಯಾಸ್ ನದಿಯಲ್ಲಿ ಕೊಚ್ಚಿ ಹೋದ ಹೈದ್ರಾಬಾದ್ ವಿದ್ಯಾರ್ಥಿಗಳು: 5 ಮೃತದೇಹ ಪತ್ತೆ
ಹಿಮಾಚಲಪ್ರದೇಶದ ಜನಪ್ರಿಯ ಪ್ರವಾಸಿ ಸ್ಥಳ ಮನಾಲಿಯಲ್ಲಿರುವ ಬ್ಯಾಸ್ ...
ಮನಾಲಿ: ಹಿಮಾಚಲಪ್ರದೇಶದ ಜನಪ್ರಿಯ ಪ್ರವಾಸಿ ಸ್ಥಳ ಮನಾಲಿಯಲ್ಲಿರುವ ಬ್ಯಾಸ್ ನದಿಯಲ್ಲಿ ಶಾಲಾ ವಿದ್ಯಾರ್ಥಿಗಳು ಕೊಚ್ಚಿ ಹೋಗಿದ್ದು, 5 ವಿದ್ಯಾರ್ಥಿಗಳ ಮೃತದೇಹ ಪತ್ತೆಯಾಗಿದೆ.
ನಿನ್ನೆ ನೀರಿನ ಪ್ರವಾಹಕ್ಕೆ ಸಿಲುಕಿ ಸುಮಾರು 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೊಚ್ಚಿಹೋಗಿದ್ದರು. ಲರ್ಜಿ ಅಣೆಕಟ್ಟಿನಿಂದ ಹೆಚ್ಚುವರಿ ನೀರನ್ನು ಹೊರಬಿಟ್ಟಿದ್ದರಿಂದ ಈ ದುರಂತ ಉಂಟಾಗಿದೆ. ವಿದ್ಯಾರ್ಥಿಗಳು ನದಿ ತೀರದಲ್ಲಿ ಫೋಟೋ ತೆಗೆಯಲು ನಿಂತಿದ್ದರು. ಈ ಸಂದರ್ಭದಲ್ಲೇ ಅಣೆಕಟ್ಟಿನಿಂದ ನೀರು ಬಿಡಲಾಗಿದೆ.
ನೀರನಲ್ಲಿ ಕೊಚ್ಚಿಕೊಂಡು ಹೋದ ವಿದ್ಯಾರ್ಥಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಇಲ್ಲಿಯವರೆಗೆ 5 ವಿದ್ಯಾರ್ಥಿಗಳ ಶವ ಪತ್ತೆಯಾಗಿದೆ.
ಹೈದ್ರಾಬಾದ್ನ ವಿಜ್ಞಾನಜ್ಯೋತಿ ಇಂಜಿನಿಯರ್ ಕಾಲೇಜು ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ. 5 ವಿದ್ಯಾರ್ಥಿನಿಯರು ಹಾಗೂ 24 ವಿದ್ಯಾರ್ಥಿಗಳು ನಾಪತ್ತೆಯಾಗಿದ್ದಾರೆ.
ಶೈಕ್ಷಣಿಕ ಪ್ರವಾಸಕ್ಕೆಂದು ಹೈದ್ರಾಬಾದ್ನ ವಿಜ್ಞಾನ ಜ್ಯೋತಿ ಇಂಜಿನಿಯರ್ ಕಾಲೇಜಿನ 48 ವಿದ್ಯಾರ್ಥಿಗಳು ಸೇರಿದಂತೆ 51 ಮಂದಿ ಎರಡು ಬಸ್ನಲ್ಲಿ ತೆರಳಿದ್ದರು. ಮನಾಲಿಯಲ್ಲಿರು ಬ್ಯಾಸ್ ನದಿ ಬಳಿ ಬಸ್ ನಿಂತಿದ್ದ ಸಂದರ್ಭದಲ್ಲಿ ಪ್ರವಾಹ ಬಂದು ಒಂದು ಬಸ್ ಕೊಚ್ಚಿಕೊಂಡು ಹೋಗಿದೆ.