ನಮ್ಮ ಪ್ರಧಾನಿ ವಿಶಾಲ ಹೃದಯಿ: ರಾಜೀವ್ ರೂಡಿ
ಕಾಂಗ್ರೆಸ್ ಈಗ ಪ್ರಾದೇಶಿಕ ಪಕ್ಷದಂತಾಗಿದ್ದು, ವಿರೋಧ ಪಕ್ಷದ ಸ್ಥಾನವು ಸಿಗದಂತಾಗಿದೆ..
ನವದೆಹಲಿ: ಕಳೆದ ಲೋಕಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋತಿರುವ ಕಾಂಗ್ರೆಸ್ ಪಕ್ಷಕ್ಕೆ ಶತಮಾನಗಳ ಇತಿಹಾಸವಿದ್ದರು ಈಗ ಪ್ರಾದೇಶಿಕ ಪಕ್ಷದಂತಾಗಿದ್ದು, ವಿರೋಧ ಪಕ್ಷದ ಸ್ಥಾನವು ಸಿಗದಂತಾಗಿದೆ ಎಂದು ಬಿಜೆಪಿ ಹಿರಿಯ ನಾಯಕ ರಾಜೀವ್ ಪ್ರತಾಪ್ ರೂಡಿ ಮಂಗಳವಾರ ಹೇಳಿದ್ದಾರೆ.
ಕಾಂಗ್ರೆಸ್ ಪ್ರಾದೇಶಿಕ ಪಕ್ಷದಂತಾಗಿದ್ದರು ಪರವಾಗಿಲ್ಲ. ದೇಶದ ಪ್ರಗತಿಗಾಗಿ ಅವರನ್ನು ತಮ್ಮೊಂದಿಗೆ ಸೇರಿಸಿಕೊಂಡು ಅವರು ಮಾತನ್ನು ಕೇಳಿಸಿಕೊಳ್ಳುವ ವಿಶಾಲ ಹೃದಯ ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಇದೆ ಎಂದರು.
ಸಂಸತ್ತಿನ ಅಧಿವೇಶನದಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ತಾವು ಅಭೂತಪೂರ್ವ ವಿಜಯ ಸಾಧಿಸಿದ್ದೇವೆ. ಆದರೆ ಅಭಿವೃದ್ಧಿ ಕಾರ್ಯದಲ್ಲಿ ಎಲ್ಲರನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗುತ್ತೇವೆ ಎಂದರು.