ಎಫ್‌ಐಆರ್‌ನಲ್ಲಿ ಅಶೋಕ್ ಗೆಹ್ಲೋಟ್, ಸಚಿನ್ ಪೈಲೆಟ್ ಹೆಸರು
ರಾಜಸ್ಥಾನದಲ್ಲಿ ನಡೆದಿರುವ ಆಂಬುಲೆನ್ಸ್ ಹಗರಣ ಸಂಬಂಧ ಸಲ್ಲಿಸಲಾಗಿರುವ...
ಜೈಪುರ: ರಾಜಸ್ಥಾನದಲ್ಲಿ ನಡೆದಿರುವ ಆಂಬುಲೆನ್ಸ್ ಹಗರಣ ಸಂಬಂಧ ಸಲ್ಲಿಸಲಾಗಿರುವ ಪ್ರಥಮ ಮಾಹಿತಿ ವರದಿ(ಎಫ್‌ಐಆರ್)ಯಲ್ಲಿ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹಾಗೂ ಕಾಂಗ್ರೆಸ್ ನಾಯಕ ಸಚಿನ್ ಪೈಲೆಟ್ ಅವರ ಹೆಸರು ಪ್ರಸ್ತಾಪವಾಗಿದೆ.
ರಾಜಸ್ಥಾನದಲ್ಲಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಯೋಜನೆಯಡಿ ನಡೆದಿರುವ ಆಂಬುಲೆನ್ಸ್ ಹಗರಣದಲ್ಲಿ ಅಶೋಕ್ ಗೆಲ್ಹೋಟ್ ಮತ್ತು ಸಚಿನ್ ಪೈಲೆಟ್ ಹೆಸರು ಕೇಳಿ ಬಂದಿದ್ದು, ಅವರಿಗೂ ಹಗರಣಕ್ಕೂ ಸಂಬಂಧವಿರುವುದರ ಬಗ್ಗೆ ಎಫ್‌ಐಆರ್‌ನಲ್ಲಿ ಪ್ರಸ್ತಾಪಿಸಲಾಗಿದೆ ಎಂದು ತಿಳಿದು ಬಂದಿದೆ.
ಪ್ರಕರಣ ಸಂಬಂಧ ಅಶೋಕ್ ಗೆಹ್ಲೋಟ್, ಸಚಿನ್ ಪೈಲೆಟ್ ಸೇರಿದಂತೆ ಎಂಟು ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಮೂರು ರಾಜ್ಯಗಳಲ್ಲಿ 108 ಆಂಬುಲೆನ್ಸ್ ಯೋಜನೆಗಾಗಿ ಕಾಂಗ್ರೆಸ್ ಸರ್ಕಾರ ಹಣ ಬಿಡುಗಡೆ ಮಾಡಿತ್ತು. ಟೆಂಡರ್ ಹಂಚಿಕೆ ಸಂಬಂಧ 2.56 ಕೋಟಿ ಹಗರಣ ನಡೆದಿದೆ ಎನ್ನಲಾಗುತ್ತಿದೆ.
ಹಗರಣ ಕುರಿತು ರಾಜ್ಯ ಅಪರಾಧ ದಳ(ಸಿಬಿ-ಸಿಐಡಿ) ಮೊದಲ ಹಂತದ ತನಿಖೆ ನಡೆಸಿದ್ದು, ಎಫ್‌ಐಆರ್ ದಾಖಲಿಸಿದೆ ಎಂದು ಮೂಲಗಳು ತಿಳಿಸಿವೆ.