ತಾಲಿಬಾನ್ ಉಗ್ರರ ವಿರುದ್ಧ ಎಫ್ಐಆರ್ ದಾಖಲಿಸಿದ ಪಾಕ್
ಕರಾಚಿಯಲ್ಲಿ ಉಗ್ರರು ದಾಳಿ ನಡೆಸಿದ ಹಿನ್ನಲೆಯಲ್ಲಿ ಪಾಕಿಸ್ತಾನದ ಪೊಲೀಸರು...
ಕರಾಚಿ: ಕರಾಚಿಯಲ್ಲಿ ಉಗ್ರರು ದಾಳಿ ನಡೆಸಿದ ಹಿನ್ನಲೆಯಲ್ಲಿ ಪಾಕಿಸ್ತಾನದ ಪೊಲೀಸರು ತಾಲಿಬಾನ್ ಉಗ್ರ ಸಂಘಟನೆ ವಿರುದ್ಧ ಬುಧವಾರ ಎಫ್ಐಆರ್ ದಾಖಲಿಸಿದೆ.
ಭಯೋತ್ಪಾದನ ನಿಗ್ರಹ ಕಾಯ್ದೆ ಅಡಿ ತೆಹರೀಕ್-ಇ-ತಾಲಿಬಾನ್ ಸಂಘಟನೆ ವಿರುದ್ಧ ಕರಾಚಿ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ತಾಲಿಬಾನ್ ಸಂಘಟನೆಯ ಮುಖ್ಯಸ್ಥ ಮುಲ್ಲಾ ಫಾಜುಲ್ಲಾ, ಸಂಘಟನೆಯ ವಕ್ತಾರ ಶಹಿದುಲ್ಲಾ ಶಾಹೀದ್ ಸೇರಿದಂತೆ ಅನೇಕ ಉಗ್ರರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ವಿಮಾನ ನಿಲ್ದಾಣದ ಭದ್ರತಾ ದಳದ ಸಹಾಯಕ ನಿರ್ದೇಶಕ ನೀಡಿರುವ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕರಾಚಿ ವಿಮಾನ ನಿಲ್ದಾಣದಲ್ಲಿ ಹಾಗೂ ಸೇನಾ ಸ್ಥಳದಲ್ಲಿ ಉಗ್ರರು ದಾಳಿ ಮಾಡಿ ಅನೇಕ ಮಂದಿ ಸಾವನ್ನಪ್ಪಿದ್ದರು. ದಾಳಿ ಮಾಡಿರುವುದು ನಮ್ಮ ಸಂಘಟನೆ ಎಂದು ತಾಲಿಬಾನ್ ಹೇಳಿಕೊಂಡಿತ್ತು.