ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ವಿಶಾಲ್ ಸಿಕ್ಕಾ ಇನ್ಫಿಯ ನೂತನ ಸಿಇಒ

ಭಾರತದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾದ ಇನ್ಫೋಸಿಸ್‌ನ ನೂತನ ಸಿಇಒ...

Vishwanath S
Updated On : 12 Jun 2014, 6:40 am

ಮುಂಬೈ: ಭಾರತದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾದ ಇನ್ಫೋಸಿಸ್‌ನ ನೂತನ ಸಿಇಒ ಆಗಿ ಸ್ಯಾಪ್ ಸಂಸ್ಥೆಯ ಮಾಜಿ ಮುಖ್ಯ ತಂತ್ರಜ್ಞಾನ ಅಧಿಕಾರಿ ವಿಶಾಲ್ ಸಿಕ್ಕಾ ಅವರನ್ನು ನೇಮಿಸಿದೆ.

ನೇಮಕ ಬಳಿಕ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶಾಲ್ ಸಿಕ್ಕಾ, ಇನ್ಫೋಸಿಸ್ ಸಂಸ್ಥೆ ನನಗೆ ಹೊಸ ಜವಾಬ್ದಾರಿಯನ್ನು ನೀಡಿದ್ದು, ಅದನ್ನು ಸಮರ್ಥವಾಗಿ ನಿರ್ವಹಿಸಿ, ಆಡಳಿತ ತನ್ನ ಮೇಲೆ ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳುತ್ತೇನೆ ಎಂದರು. ಅಲ್ಲದೆ ಮುಂದಿನ ದಿನಗಳಲ್ಲಿ ಸಂಸ್ಥೆಯನ್ನು ಮತ್ತಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯುವೆ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ.

ಗುಜರಾತ್ ನ ವಡೋದರಾ ಮೂಲದವರಾದ ಸಿಕ್ಕಾ ಅವರು ಜರ್ಮಿನಿಯ ಸ್ಯಾಪ್ ಕಂಪನಿಯ ಎಕ್ಸಿಕ್ಯೂಟಿವ್ ಬೋರ್ಡ್ ಸದಸ್ಯರಾಗಿದ್ದರು. ಇದೀಗ ಇನ್ಫೋಸಿಸ್‌ನ ನೂತನ ಸಾರಥಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

45 ವರ್ಷದ ವಿಶಾಲ್ ಸಿಕ್ಕಾ ಅವರು ಆಗಸ್ಟ್ 1ರಂದು ಹಾಲಿ ಸಿಇಒ ಶಿಬುಲಾಲ್ ಅವರಿಂದ ಅಧಿಕಾರ ಸ್ವೀಕರಿಸಲಿದ್ದಾರೆ. ಇದೇ ಮೊದಲ ಬಾರಿಗೆ ಇನ್ಫೋಸಿಸ್ ಸ್ಥಾಪಕ ಸದಸ್ಯರಲ್ಲದವರು ಸಿಇಒ ಆಗಿ ನೇಮಕವಾಗಿದ್ದಾರೆ.

ಇನ್ಫೋಸಿಸ್‌ನ ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ನಾರಾಯಣ ಮೂರ್ತಿ ಹಾಗೂ ಉಪ ನಿರ್ದೇಶಕರಾಗಿರುವ ಗೋಪಾಲ್‌ಕೃಷ್ಣನ್ ಅವರು ಜೂನ್ 14ರಂದು ತಮ್ಮ ಸ್ಥಾನಗಳಿಗೆ ರಾಜಿನಾಮೆ ನೀಡಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement