ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ರಜೆ, ಪ್ರವಾಸ ಸೌಲಭ್ಯ ಹಗರಣ: ಹಾಲಿ, ಮಾಜಿ ಸಂಸದರ ವಿರುದ್ಧ ಎಫ್‌ಐಆರ್

ರಜೆ ಪ್ರವಾಸ ಸೌಲಭ್ಯ ಹಗರಣ ಸಂಬಂಧ ಮೂವರು ಹಾಲಿ ರಾಜ್ಯಸಭಾ ಸದಸ್ಯರು ಹಾಗೂ ಮೂವರು ಮಾಜಿ ರಾಜ್ಯಸಭಾ ಸದಸ್ಯರ ವಿರುದ್ಧ ಶುಕ್ರವಾರ ಸಿಬಿಐ ಎಫ್‌ಐಆರ್ ದಾಖಲಿಸಿದೆ.

ಲಾಲ್ಹಿಮಿಂಗ್ , ಬ್ರಿಜೇಶ್ , ಡಿ. ಬಂಡೋಪದ್ಯಾಯ್
Vishwanath S
Updated On : 13 Jun 2014, 1:25 am

ನವದೆಹಲಿ: ರಜೆ ಪ್ರವಾಸ ಸೌಲಭ್ಯ ಹಗರಣ ಸಂಬಂಧ ಮೂವರು ಹಾಲಿ ರಾಜ್ಯಸಭಾ ಸದಸ್ಯರು ಹಾಗೂ ಮೂವರು ಮಾಜಿ ರಾಜ್ಯಸಭಾ ಸದಸ್ಯರ ವಿರುದ್ಧ ಶುಕ್ರವಾರ ಸಿಬಿಐ ಎಫ್‌ಐಆರ್ ದಾಖಲಿಸಿದೆ.

ಈ ಸಂಬಂಧ ಇಂದು ಸಿಬಿಐ ಅಧಿಕಾರಿಗಳು ಕೆಲವು ಸಂಸದರು, ರಾಜ್ಯಸಭಾ ಸದಸ್ಯರು ಹಾಗೂ ಅಧಿಕಾರಿಗಳ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ.

ದೆಹಲಿ ಹಾಗೂ ಒಡಿಸ್ಸಾ ಸೇರಿದಂತೆ 10 ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ, ದಾಖಲೆಗಳ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಭಾರಿ ಪ್ರಮಾಣದಲ್ಲಿ ನಡೆದಿದೆ ಎನ್ನಲಾದ ರಜೆ ಪ್ರವಾಸ ಸೌಲಭ್ಯ(ಲೀವ್ ಟ್ರಾವೆಲ್ ಕನ್ಸೇಷನ್-ಎಲ್‌ಟಿಸಿ) ಹಗರಣದ ಸಂಬಂಧ ಹಾಲಿ ರಾಜ್ಯಸಭಾ ಸದಸ್ಯರಾದ ತೃಣಮೂಲ ಕಾಂಗ್ರೆಸ್‌ನ ಡಿ. ಬಂಡೋಪದ್ಯಾಯ್, ಬಹುಜನ ಸಮಾಜವಾದಿ ಪಕ್ಷದ ಬ್ರಿಜೇಶ್ ಪಾತಕ್ ಮತ್ತು ಎಂಪಿಎಫ್‌ನ ಲಾಲ್ಹಿಮಿಂಗ್ ಲಿಯಾನ ಹಾಗೂ ಮಾಜಿ ಸದಸ್ಯರಾದ ಬಿಜೆಪಿಯ ಜೆ.ಪಿ.ಎನ್ ಸಿಂಗ್, ಬಿಜೆಡಿಯ ರೇಣು ಬಾಲಾ, ಆರ್‌ಎಲ್‌ಡಿಯ ಮೆಹಮದ್ ಹರ್ಷದ್ ಮಂದನಿ ವಿರುದ್ಧ ಸಿಬಿಐ ಆರೋಪಿಸಿದೆ.

ಈ ಪ್ರಕರಣದಲ್ಲಿ ಭಾರಿ ಕುಳಗಳು ತೊಡಗಿಕೊಂಡಿರುವುದನ್ನು ಪತ್ತೆ ಹಚ್ಚಿರುವ ಸಿಬಿಐ ಪೊಲೀಸರು ನಕಲಿ ವಿಮಾನ ಟಿಕೆಟ್‌ಗಳು, ದಾಖಲೆಗಳಿಗಾಗಿ ಅನೇಕ ಹಿರಿಯ ಅಧಿಕಾರಿಗಳು ಹಾಲಿ ಹಾಗೂ ಮಾಜಿ ಸಂಸದರ ಮನೆಗಳಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಇದೇ ವೇಳೆ ವಿವಿಧ ಟ್ರಾವೆಲ್ ಏಜೆನ್ಸಿಗಳ ಮೇಲೂ ಸಿಬಿಐ ಪೊಲೀಸರು ದಾಳಿ ನಡೆಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement