ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಹಿಂಸಾಚಾರ ರಹಿತ ವಾತಾವರಣ ಬಯಸುತ್ತೇನೆ: ನವಾಜ್‌ಗೆ ಮೋದಿ ಪತ್ರ

ಉಭಯ ದೇಶಗಳಲ್ಲಿ ಹಿಂಸಾಚಾರ ರಹಿತ ವಾತಾವರಣ ನಿರ್ಮಾಣಕ್ಕಾಗಿ...

Mainashree
Updated On : 13 Jun 2014, 3:54 am

ನವದೆಹಲಿ: ಉಭಯ ದೇಶಗಳ ನಡುವೆ ಹಿಂಸಾಚಾರ ರಹಿತ ವಾತಾವರಣ ನಿರ್ಮಾಣಕ್ಕಾಗಿ ಬಯಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನದ ಅಧ್ಯಕ್ಷ ನವಾಜ್ ಷರೀಫ್ಗೆ ಪತ್ರ ಬರೆದಿದ್ದಾರೆ.


ಗಲಭೆ ರಹಿತ ವಾತಾವರಣ ನಿರ್ಮಿಸುವುದು ನಮ್ಮ ಗುರಿಯಾಗಿದ್ದು,  ಇದಕ್ಕಾಗಿ ನಿಮ್ಮ ಬೆಂಬಲ ನಿರೀಕ್ಷಿಸುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಕರಾಚಿಯಲ್ಲಿ ಉಗ್ರರ ದಾಳಿಯನ್ನು ಖಂಡಿಸಿರುವ ಮೋದಿ, ಘಟನೆ ಕುರಿತು ವಿಷಾಧಿಸಿದ್ದಾರೆ. ಭಯೋತ್ಪಾದಕರನ್ನು ನಿಗ್ರಹ ಮಾಡಿ, ನೆರೆ ದೇಶಗಳ ಬಾಂಧವ್ಯವನ್ನು ಗಟ್ಟಿಗೊಳಿಸೋಣ ಎಂದು ಹೇಳಿದ್ದಾರೆ.

ಶಾಂತಿ, ಸ್ನೇಹ ಮತ್ತು ಉತ್ತಮ ಬೆಂಬಲದೊಂದಿಗೆ ಉಭಯ ದೇಶಗಳ ಸಂಬಂಧವನ್ನು ಗಟ್ಟಿಗೊಳಿಸಿ, ಮುಂದಿನ ಯುವಪೀಳಿಗೆಗೆ ಉದ್ಯೋಗವಕಾಶ ಕಲ್ಪಿಸಿ ದೇಶಗಳನ್ನು ಅಭಿವೃದ್ಧಿ ಪಡಿಸೋಣ. ಇದಕ್ಕೆ ನಿಮ್ಮ ಸಹಕಾರ ಬಹಳ ಮುಖ್ಯವಾಗಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement