ಮುಂಬೈನಲ್ಲಿ ಮತ್ತೆ ಅಲೆಗಳ ಅಬ್ಬರ
ಮತ್ತೆ ಮುಂಬೈನಲ್ಲಿ ಸಮುದ್ರದ ಅಲೆಗಳ ಮಟ್ಟ ಏರಿಕೆಯಾಗಿದ್ದು, ದಡಕ್ಕೆ ನೀರು ನುಗ್ಗಿದೆ...
ಮುಂಬೈ: ಮುಂಬೈನಲ್ಲಿ ಮತ್ತೆ ಸಮುದ್ರದ ಅಲೆಗಳ ಮಟ್ಟ ಏರಿಕೆಯಾಗಿದ್ದು, ದಡಕ್ಕೆ ನೀರು ನುಗ್ಗಿದೆ.
ಸಮುದ್ರ ಅಲೆಗಳ ಮಟ್ಟ 4.5 ಮೀಟರ್ ಏರಿಕೆಯಾಗಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಜೂನ್ 18ರವರೆಗೆ ಇದೇ ರೀತಿ ಸಮುದ್ರದ ಮಟ್ಟ ಏರಿಕೆಯಾಗಲಿದ್ದು, ತೀರ ಪ್ರದೇಶದ ನಿವಾಸಿಗಳಿಗೆ ಸ್ಥಳದಿಂದ ನಿರ್ಗಮಿಸಿ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಮುಂಬೈನ ಸಮುದ್ರ ತೀರದಲ್ಲಿ ಭದ್ರತಾ ಸಿಬ್ಬಂದಿಗಳನ್ನು ನೇಮಿಸಿದ್ದು, ಜನರನ್ನು ಸಮುದ್ರದ ಬಳಿ ಹೋಗವುದಕ್ಕೆ ನಿರ್ಬಂಧ ಹಾಕಲಾಗಿದೆ.
ಗಿರ್ಗಾನ್, ದಡಾರ್, ಜುಹು, ವರ್ಸೋವ, ಅಕ್ಸಾ ಬೀಚ್, ಗೋರೈ ಬೀಚ್ ಮತ್ತು ಚೌಪಟ್ಟಿ ಬಿಚ್ ಸುತ್ತಾಮುತ್ತಾ ಪ್ರದೇಶಗಳಲ್ಲಿ ಅಲೆಗಳ ಅಬ್ಬರ ಉಂಟಾಗಿರುವುದರಿಂದ 6 ಭದ್ರತಾ ತಂಡಗಳನ್ನು ನಿಯೋಜಿಸಲಾಗಿದೆ.
ಇದೇ ರೀತಿ ಸಮುದ್ರದ ಮಟ್ಟ ಏರಿಕೆಯಾಗುತ್ತಿದ್ದರೆ ತೀರಾ ಪ್ರದೇಶಗಳಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.