ಇರಾಕ್ನಲ್ಲಿ ಭಾರತೀಯರಿಗೆ ಮನೆಯಿಂದ ಹೊರಬರದಂತೆ ಸೂಚನೆ
ಇರಾಕ್ನಲ್ಲಿ ಉಗ್ರರು ದಾಳಿ ಮಾಡುತ್ತಿರುವ ಹಿನ್ನಲೆಯಲ್ಲಿ, ಇರಾಕ್ನಲ್ಲಿರುವ...
ನವದೆಹಲಿ: ಇರಾಕ್ನಲ್ಲಿ ಉಗ್ರರು ದಾಳಿ ಮಾಡುತ್ತಿರುವ ಹಿನ್ನಲೆಯಲ್ಲಿ, ಇರಾಕ್ನಲ್ಲಿರುವ ಭಾರತೀಯರಿಗೆ ಮನೆಯಿಂದ ಹೊರಬರದಂತೆ ವಿದೇಶಾಂಗ ಸಚಿವಾಲಯ ಸೂಚನೆ ನೀಡಿದೆ.
ಇರಾಖ್ ಸೇನೆ ಮತ್ತು ಉಗ್ರರ ನಡುವೆ ದಾಳಿ ಮುಂದುವರೆದಿದ್ದು, ಭಾರತೀಯರ ಮೇಲೆ ಉಗ್ರರು ದಾಳಿ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಸನ್ನಿ ಮುಸ್ಲಿಂ ಜನಾಂಗದ ಉಗ್ರರು ಈ ದಾಳಿ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಹಿನ್ನಲೆಯಲ್ಲಿ ಭಾರತೀಯರು ಇರಾಕ್ಗೆ ಪ್ರವಾಸ ಕೈಗೊಳ್ಳದಿರುವುದು ಒಳ್ಳೆಯದು ಎಂದು ಸಚಿವಾಲಯ ತಿಳಿಸಿದೆ.