ಬಿಜೆಪಿ ಸಂಸದೆ ಸಾಧ್ವಿ ನಿರಂಜನ್ ಮೇಲೆ 4 ದುಷ್ಕರ್ಮಿಗಳಿಂದ ಹಲ್ಲೆ
ಫತೇಪುರ್: ಬಿಜೆಪಿ ಸಂಸದೆ ಸಾಧ್ವಿ ನಿರಂಜನ್ ಜ್ಯೋತಿ ಅವರ ಮೇಲೆ ನಾಲ್ವರು ದುಷ್ಕರ್ಮಿಗಳು ಭಾನುವಾರ ದಾಳಿ ನಡೆಸಿದ್ದಾರೆ.
ಉತ್ತರಪ್ರದೇಶದ ಫತೇಪುರ್ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದೆಯಾಗಿದ್ದು, ಇಂದು ಬೆಳಗ್ಗೆ ಖಾಸಗಿ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ಸಾಧ್ವಿ ಅವರ ಕಾರನ್ನು ತಡೆದು ಅವರ ಜತೆ ನಾಲ್ವರು ದುಷ್ಕರ್ಮಿಗಳು ವಾಗ್ವಾದ ನಡೆಸಿದ್ದಾರೆ. ಅಲ್ಲದೆ ಸಾಧ್ವಿ ನಿರಂಜನ್ ಅವರ ಭದ್ರತಾ ಸಿಬ್ಬಂದಿಯಿಂದ ಬಂದೂಕು ಕಸಿದುಕೊಂಡು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.
ಸಾಧ್ವಿ ನಿರಂಜನ್ ಅವರ ಮೇಲೆ ದಾಳಿ ನಡೆಸಿದ್ದ ದುಷ್ಕರ್ಮಿಗಳ ಪೈಕಿ ಓರ್ವನನ್ನು ಬಂಧಿಸಲಾಗಿದ್ದು, ಮೂವರು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.