ಕ್ಷಮೆ ಕೋರಿ ಸುಬ್ರಮಣಿಯನ್ ಸ್ವಾಮಿಗೆ ಪತ್ರ ಬರೆದ ಸಂಜಯ್ ಝಾ
ಸುಬ್ರಮಣಿಯನ್ ಸ್ವಾಮಿ ಅವರುನ್ನು ಕೇಂದ್ರ ತನಿಖಾ ದಳ (ಸಿಐಎ) ಸಂಸ್ಥೆಯ ಏಜೆಂಟ್ ಎಂದು ಕರೆದು ವಿವಾದ...
ನವದೆಹಲಿ: ಸುಬ್ರಮಣಿಯನ್ ಸ್ವಾಮಿ ಅವರುನ್ನು ಕೇಂದ್ರ ತನಿಖಾ ದಳ (ಸಿಐಎ) ಸಂಸ್ಥೆಯ ಏಜೆಂಟ್ ಎಂದು ಕರೆದು ವಿವಾದಕ್ಕೊಳಗಾಗಿದ್ದ ಕಾಂಗ್ರೆಸ್ ನಾಯಕ ಸಂಜಯ್ ಝಾ ಇದೀಗ ಸುಬ್ರಮಣಿಯನ್ ಸ್ವಾಮಿ ಅವರಿಗೆ ಪತ್ರ ಬರೆದು ಕ್ಷಮೆಯಾಚನೆ ಮಾಡಿದ್ದಾರೆ.
1977ರಲ್ಲಿ ಇಂದಿರಾ ಗಾಂಧಿ ಅವರ ಅನಾರೋಗ್ಯದ ಬಗ್ಗೆ ಭಾರತೀಯ ಜನತಾ ಪಕ್ಷದ ನಾಯಕರೊಬ್ಬರು ಅಮೆರಿಕಕ್ಕೆ ಮಾಹಿತಿ ನೀಡಿದ್ದರು ಎಂದು ವಿಕಿಲೀಕ್ಸ್ ಬಹಿರಂಗ ಪಡಿಸಿತ್ತು. ಈ ವಿಷಯ ಬಹಿರಂಗವಾದಾಗ ಝಾ ಅವರು ಸುಬ್ರಮಣಿಯನ್ ಸ್ವಾಮಿ ಅವರನ್ನು ಸಿಐಎ ಏಜೆಂಟ್ ಎಂದು ಕರೆದಿದ್ದರು.
ಈ ಬಗ್ಗೆ ಟ್ವೀಟಿಸಿರುವ ಸ್ವಾಮಿ, ನನ್ನ ಕಾನೂನು ಸಲಹೆಗಾರರಾದ ಸುಪ್ರಿಯಾ ಮನನ್, ಇಷ್ಕರನ್ ಭಂಡಾರಿ ಮತ್ತು ನನ್ನ ಪತ್ನಿ ಡಾ. ರೊಕ್ಸಾನಾ ಸ್ವಾಮಿ ತನಗೆ ಝಾ ಅವರು ಇಮೇಲ್ ಕಳುಹಿಸಿದ್ದಾರೆ ಎಂಬುದನ್ನು ದೃಢೀಕರಿಸಿದ್ದಾರೆ.
ಆ ಇಮೇಲ್ ಸಂಜಯ್ ಝಾ ಕಳುಹಿಸಿದ ಕ್ಷಮೆಯಾಚನೆ ಪತ್ರವಾಗಿತ್ತು ಎಂದು ಸ್ವಾಮಿ ಆಮೇಲೆ ರೀಟ್ವೀಟ್ ಮಾಡಿದ್ದರು.