ಡಿಎಂಕೆಗೆ ಖುಷ್ಬೂ ರಾಜಿನಾಮೆ
ನಟಿ, ರಾಜಕಾರಣಿ ಖುಷ್ಬೂ ಡಿಎಂಕೆ ಪಕ್ಷ ತೊರೆದಿದ್ದಾರೆ...
ಚೆನ್ನೈ: ನಟಿ, ರಾಜಕಾರಣಿ ಖುಷ್ಬೂ ಡಿಎಂಕೆ ಪಕ್ಷ ತೊರೆದಿದ್ದಾರೆ.
ನನ್ನ ಶ್ರಮಕ್ಕೆ ಸರಿಯಾದ ಮನ್ನಣೆ ಸಿಕ್ಕಿಲ್ಲ. ಇದರಿಂದ ನಾನು ತುಂಬಾ ಒತ್ತಡ ಅನುಭವಿಸಬೇಕಾಗಿ ಬಂತು ಎಂದು ಖುಷ್ಬೂ ಡಿಎಂಕೆ ಮುಖ್ಯಸ್ಥ ಎಂ.ಕರುಣಾನಿಧಿ ಅವರಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.
ಬಾಲನಟಿಯಾಗಿ ಚಿತ್ರರಂಗಕ್ಕೆ ಕಾಲಿರಿಸಿದ ಖುಷ್ಬೂ 2010ರಲ್ಲಿ ಡಿಎಂಕೆ ಸೇರಿದ್ದರು. ಚುನಾವಣೆಯಲ್ಲಿ ಸ್ಪರ್ಧಿಸದೇ ಇದ್ದರೂ, ಡಿಎಂಕೆಯ ಸ್ಟಾರ್ ಪ್ರಚಾರಕರಾಗಿದ್ದರು ಅವರು.
ಪಕ್ಷ ತೊರೆಯುವುದ ಕಷ್ಟ ಅಂತ ಗೊತ್ತಿದೆ. ಆದರೆ ಇದೀಗ ಸಮಯ ಬಂದಿದೆ. ನಗುಮುಖದಿಂದಲೇ ಹೊರ ಹೋಗುತ್ತಿದ್ದೇನೆ ಎಂದು ಟ್ವೀಟ್ ಮಾಡುವ ಮೂಲಕ ಖುಷ್ಬೂ ತನ್ನ ರಾಜಿನಾಮೆ ವಿಷಯವನ್ನು ಬಹಿರಂಗ ಪಡಿಸಿದ್ದಾರೆ.