ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಪ್ರೀತಿ ಜಿಂಟಾ ಪ್ರಕರಣ; ಇನ್ನೆರಡು ದಿನಗಳಲ್ಲಿ ಸಾಕ್ಷಿದಾರರ ಹೇಳಿಕೆ ದಾಖಲು

ಉದ್ಯಮಿ, ಮಾಜಿ ಗೆಳೆಯ ನೆಸ್ ವಾಡಿಯಾ ವಿರುದ್ಧ ನಟಿ ಪ್ರೀತಿ ಜಿಂಟಾ ಮಾಡಿರುವ ಲೈಂಗಿಕ ಕಿರುಕುಳದ ಆರೋಪ...

Rashmi Kasaragodu
Updated On : 16 Jun 2014, 4:40 am

ಮುಂಬಯಿ: ಉದ್ಯಮಿ, ಮಾಜಿ ಗೆಳೆಯ ನೆಸ್ ವಾಡಿಯಾ ವಿರುದ್ಧ ನಟಿ ಪ್ರೀತಿ ಜಿಂಟಾ ಮಾಡಿರುವ ಲೈಂಗಿಕ ಕಿರುಕುಳದ ಆರೋಪ ಸಂಬಂಧ ಸಾಕ್ಷಿದಾರರ ಹೇಳಿಕೆಯನ್ನು ಸೋಮವಾರ ಮತ್ತು ಮಂಗಳವಾರ ದಾಖಲಿಸುವ ಸಾಧ್ಯತೆಯಿದೆ.

ಮೇ 30ರಂದು ವಾಂಘೆಡೆ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯ ನಡೆಯುತ್ತಿದ್ದ ವೇಳೆ ನೆಸ್ ವಾಡಿಯಾ ಜತೆ ಪ್ರೀತಿ ಜಗಳ ನಡೆದಿತ್ತು. ವಾಡಿಯಾ ತನ್ನನ್ನು ಕೀಳು ಮಟ್ಟದ ಭಾಷೆಯಲ್ಲಿ ಬೈದಿದ್ದು ಮಾತ್ರವಲ್ಲದೆ ತನಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಪ್ರೀತಿ ಆರೋಪಿಸಿದ್ದರು. ಈ ಬಗ್ಗೆ ಮುಂಬೈ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಇನ್ನೊಮ್ಮೆ ಪ್ರೀತಿಯ ಹೇಳಿಕೆಯನ್ನು ದಾಖಲಿಸುವ ಸಾಧ್ಯತೆ ಇದೆ. ಅದೇ ವೇಳೆ ತನ್ನ ದೂರಿನಲ್ಲಿ ಸಾಕ್ಷಿದಾರರು ಎಂದು ಪ್ರೀತಿ ಜಿಂಟಾ ಹೇಳಿರುವ ವ್ಯಕ್ತಿಗಳನ್ನು ಸೋಮವಾರ ಮತ್ತು ಮಂಗಳವಾರ ಪೊಲೀಸರ ಮುಂದೆ ಹಾಜರಾಗುವಂತೆ ಹೇಳಲಾಗಿದ್ದು ಅವರ ಹೇಳಿಕೆಯನ್ನು ದಾಖಲಿಸಲಾಗುವುದು ಎಂದು ಬಲ್ಲಮೂಲಗಳು ಹೇಳಿವೆ.

ವಾಂಘಡೆ ಸ್ಟೇಡಿಯಂನ ಪೆವಿಲಿಯನ್ ನಲ್ಲಿದ್ದ ಸಿಸಿ ಟೀವಿ ದೃಶ್ಯಾವಳಿಗಳನ್ನು ಪೊಲೀಸರು ಪರೀಕ್ಷಿಸಿದ್ದರೂ ನೆಸ್ ಮತ್ತು ಪ್ರೀತಿ ಅವರು ಕುಳಿತ ಸೀಟುಗಳು ಅಲ್ಲಿ ಗೋಚರಿಸುತ್ತಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ನೆಸ್ ವಾಡಿಯಾ ಪ್ರೀತಿಗೆ ಕಳುಹಿಸಿದ ಬೆದರಿಕೆ ಇಮೇಲ್‌ಗಳನ್ನು ಪೊಲೀಸರು ವಶ ಪಡಿಸಿದ್ದು ಪ್ರಸ್ತುತ ಪ್ರಕರಣದಲ್ಲಿ ಇದೇ ಮಹತ್ವದ ಸಾಕ್ಷಿ ಎಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement