ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಯಶ್ವಂತ್ ಸಿನ್ಹಾ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

ಜಾಮೀನು ಪಡೆಯಲು ನಿರಾಕರಿಸಿದ ಹಿನ್ನೆಲೆಯಲ್ಲಿ ಜಾರ್ಖಂಡ್ ನ್ಯಾಯಾಲಯ ಯಶ್ವಂತ್ ಸಿನ್ಹಾ ಅವರ ನ್ಯಾಯಾಂಗ ಬಂಧನದ...

Rashmi Kasaragodu
Updated On : 16 Jun 2014, 2:40 am

ರಾಂಚಿ: ಜಾಮೀನು ಪಡೆಯಲು ನಿರಾಕರಿಸಿದ ಹಿನ್ನೆಲೆಯಲ್ಲಿ ಜಾರ್ಖಂಡ್ ನ್ಯಾಯಾಲಯ ಯಶ್ವಂತ್ ಸಿನ್ಹಾ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ಜೂನ್ 28ರವರೆಗೆ ವಿಸ್ತರಿಸಿದೆ.

ಜಾರ್ಖಂಡ್‌ನ ಹಜಾರಿಭಾಗ್‌ನ ವಿದ್ಯುತ್ ಇಲಾಖೆ ವ್ಯವಸ್ಥಾಪಕ ನಿರ್ದೇಶಕ ದಾನೇಶ್ ಝಾ ಅವರ ಮೇಲೆ ಹಲ್ಲೆ ಮಾಡಲು ಪ್ರೇರಪಣೆ ನೀಡಿದ ಆರೋಪದಲ್ಲಿ ಸಿನ್ಹಾ ಅವರನ್ನು ಬಂಧಿಸವಾಗಿತ್ತು.

ರಾಜ್ಯದಲ್ಲಿನ ವಿದ್ಯುಕ್ ನೀಡುವಿಕೆಯ ವೈಫಲ್ಯದ ವಿರುದ್ಧ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ ವೇಳೆ ಸಿನ್ಹಾ ಅವರು ದಾನೇಶ್ ಝಾ ಅವರನ್ನು ಕಟ್ಟಿ ಹಾಕಲು ಆದೇಶಿಸಿದ್ದರು ಎನ್ನಲಾಗಿದೆ.

ಸಿನ್ಹಾ ಅವರ ಆದೇಶದಂತೆ ಝಾ ಅವರನ್ನು ಬಿಜೆಪಿ ಮಹಿಳಾ ಕಾರ್ಯಕರ್ತೆಯರು ಹಗ್ಗದಿಂದ ಮರವೊಂದಕ್ಕೆ ಕಟ್ಟಿಹಾಕಿದ್ದರು.

ಈ ಘಟನೆಗೆ ಸಂಬಂಧಪಟ್ಟಂತೆ ಝಾ ನೀಡಿದ ದೂರಿನಂತೆ ಪೊಲೀಸರು ಸಿನ್ಹಾ ಅವರನ್ನು ಬಂಧಿಸಿ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದ್ದರು.

ಬಿಜೆಪಿ ಮೂಲಗಳ ಪ್ರಕಾರ ಎಲ್.ಕೆ ಆಡ್ವಾಣಿ ಅವರು ಮಂಗಳವಾರ ಜೈಲ್‌ನಲ್ಲಿ ಸಿನ್ಹಾ ಅವರನ್ನು ಭೇಟಿ ಮಾಡಲಿದ್ದಾರೆ. ಏತನ್ಮಧ್ಯೆ, ವಿದ್ಯುತ್ ಸಮಸ್ಯೆಯ ಬಗ್ಗೆ ಬಿಜೆಪಿ ಸೋಮವಾರ ಹಂತ ಹಂತವಾಗಿ ಪ್ರತಿಭಟನೆ ನಡೆಸಲು ಮುಂದಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement