ವಿದೇಶಿ ಕಂಪನಿಗಳು ಪಾಕ್ ತೊರೆಯುವಂತೆ ತಾಲೀಬಾನ್ ಆದೇಶ
ಪಾಕಿಸ್ತಾನದಲ್ಲಿರುವ ವಿದೇಶಿ ಕಂಪನಿಗಳು ಕೂಡಲೇ ದೇಶ ತೊರೆಯಬೇಕೆಂದು ಪಾಕಿಸ್ತಾನದ ತಾಲೀಬಾನ್ ಆದೇಶ ...
ಪೇಶಾವರ್: ಪಾಕಿಸ್ತಾನದಲ್ಲಿರುವ ವಿದೇಶಿ ಕಂಪನಿಗಳು ಕೂಡಲೇ ದೇಶ ತೊರೆಯಬೇಕೆಂದು ಪಾಕಿಸ್ತಾನದ ತಾಲೀಬಾನ್ ಆದೇಶ ಹೊರಡಿಸಿದೆ.
ಪಾಕಿಸ್ತಾನದಲ್ಲಿರುವ ವಿದೇಶಿ ಹೂಡಿಕೆದಾರರು, ಏರ್ಲೈನ್ಸ್ ಮತ್ತು ಬಹುರಾಷ್ಟ್ರೀಯ ಕಂಪನಿಗಳು ಪಾಕಿಸ್ತಾನದೊಂದಿಗೆ ಹೊಂದಿರುವ ವ್ಯವಹಾರಗಳನ್ನು ಕೂಡಲೇ ಸ್ಥಗಿತಗೊಳಿಸಿ ಪಾಕಿಸ್ತಾನವನ್ನು ತೊರೆಯಬೇಕು. ಇಲ್ಲವಾದಲ್ಲಿ ಮುಂಬರುವ ಕಷ್ಟ ನಷ್ಟಗಳನ್ನು ಎದುರಿಸಲು ಸಿದ್ಧವಾಗಬೇಕು ಎಂದು ತಾಲೀಬಾನ್ನ ವಕ್ತಾರ ಶಹೀದುಲ್ಲಾ ಶಹೀದ್ ಹೇಳಿದ್ದಾರೆ.
ಪಾಕಿಸ್ತಾನದ ಪ್ರಧಾನ ವಿಮಾನ ನಿಲ್ದಾಣವಾದ ಕರಾಚಿಯಲ್ಲಿ ಉಗ್ರರ ದಾಳಿ ನಡೆಸಿದ ನಂತರ ಇದೀಗ ಉಗ್ರರು ಪಾಕ್ ಸರ್ಕಾರದ ವಿರುದ್ದವೇ ಸಮರ ಸಾರಿದ್ದಾರೆ.
ಉಗ್ರರ ವಿರುದ್ಧ ಸಮರ ಸಾರಿರುವ ಪಾಕ್ ಸರ್ಕಾರದ ವಿರುದ್ಧ ಕಿಡಿ ಕಾರಿದ ತಾಲೀಬಾನ್, ಉಗ್ರರ ವಿರುದ್ಧದ ಸಮರದಲ್ಲಿ ಬುಡಕಟ್ಟು ಜನಾಂಗದ ಬಡಜನರು ಸಾವನ್ನಪ್ಪಿದ್ದಾರೆ. ಅವರ ಸಾವಿಗೆ ನವಾಜ್ ಶರೀಫ್ ಸರ್ಕಾರ ಮತ್ತು ಪಂಜಾಬಿ ಪ್ರಭಾವಿ ಅಧಿಕಾರಿ ವರ್ಗವೇ ಕಾರಣ ಎಂದು ಆರೋಪಿಸಿದೆ.