ಜೈಲಿನಲ್ಲಿ ಯಶ್ವಂತ್ ಸಿನ್ಹಾ ಅವರನ್ನು ಭೇಟಿ ಮಾಡಿದ ಆಡ್ವಾಣಿ
ಜಾರ್ಖಂಡ್ನ ಜೈಲಿನಲ್ಲಿರುವ ಬಿಜೆಪಿ ಹಿರಿಯ ನಾಯಕ ಯಶ್ವಂತ್ ಸಿನ್ಹಾ ಅವರನ್ನು ಎಲ್ ಕೆ ಆಡ್ವಾಣಿ ...
ಹಜಾರಿಭಾಗ್: ಜಾರ್ಖಂಡ್ನ ಜೈಲಿನಲ್ಲಿರುವ ಬಿಜೆಪಿ ಹಿರಿಯ ನಾಯಕ ಯಶ್ವಂತ್ ಸಿನ್ಹಾ ಅವರನ್ನು ಎಲ್ ಕೆ ಆಡ್ವಾಣಿ ಮಂಗಳವಾರ ಭೇಟಿ ಮಾಡಿದ್ದಾರೆ. ವಿದ್ಯುತ್ ಸಮಸ್ಯೆಯ ಬಗ್ಗೆ ಹಜಾರಿಭಾಗ್ನಲ್ಲಿ ಪ್ರತಿಭಟನೆ ನಡೆಸಿ ಬಂಧನಕ್ಕೊಳಗಾಗಿರುವ ಸಿನ್ಹಾ ಕಳೆದ 2 ವಾರಗಳಿಂದ ಜೈಲು ವಾಸ ಅನುಭವಿಸುತ್ತಿದ್ದಾರೆ.
ಜಾರ್ಖಂಡ್ ನಲ್ಲಿ ವಿದ್ಯುತ್ ಸಮಸ್ಯೆ ಪರಿಹಾರವಾಗುವ ವರೆಗೆ ತಾನು ಜಾಮೀನು ಪಡೆಯುವುದಿಲ್ಲ ಎಂದು ಹಠ ಹಿಡಿದಿರುವುದರಿಂದ ಸಿನ್ಹಾ ಜೂನ್ 28ರ ವರೆಗೆ ಜೈಲು ವಾಸ ಅನುಭವಿಸಬೇಕಾಗಿ ಬಂದಿದೆ.
ಯಶ್ವಂತ್ ಸಿನ್ಹಾ ಅವರನ್ನು ಭೇಟಿ ಮಾಡಿದ ನಂತರ ಮಾಧ್ಯಮದವರಲ್ಲಿ ಮಾತನಾಡಿದ ಆಡ್ವಾಣಿ, ಸಿನ್ಹಾ ಅವರು ಜೈಲಿನಿಂದ ಬಂದ ನಂತರ ಜಾರ್ಖಂಡ್ನಲ್ಲಿ ಬಿಜೆಪಿ ನೇತೃತ್ವ ವಹಿಸಲಿದ್ದಾರೆ ಎಂದು ಹೇಳಿದ್ದಾರೆ.
ಸಿನ್ಹಾ ಅವರ ಪ್ರಕರಣದ ಬಗ್ಗೆ ಮುಂದಿನ ವಿಚಾರಣೆ ಜೂನ್ 28ಕ್ಕೆ ನಡೆಯಲಿದೆ.