ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ನೆನಗುದಿಗೆ ಬಿದ್ದಿರುವ ದೊಡ್ಡಕೆರೆ ಅಭಿವೃದ್ಧಿ

Mainashree
Updated On : 17 Jun 2014, 9:23 am

ವಿಶೇಷ ವರದಿ
ಸಕಲೇಶಪುರ: ಪಟ್ಟಣದ ಜನರ ಬಹು ಮಹತ್ವಕಾಂಕ್ಷೆ ಯೋಜನೆಯಾದ ದೊಡ್ಡಕೆರೆ ಅಭಿವೃದ್ಧಿಕಾಮಗಾರಿ ನೆನಗುದಿಗೆ ಬೀಳುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.
ಸತತ ಒಂದು ದಶಕಗಳ ನಿರಂತರ ಹೋರಾಟದ ಫಲವಾಗಿ ಪಟ್ಟಣದ ದೊಡ್ಡಕೆರೆ ಅಭಿವೃದ್ಧಿಯನ್ನು ರಾಜ್ಯ ಕೆರೆ ಅಭಿವೃದ್ಧಿ ಪ್ರಾಧಿಕಾರ ರು. 94 ಲಕ್ಷ ವೆಚ್ಚದಲ್ಲಿ ಕೈಗೆತ್ತಿಕೊಂಡಿದ್ದು ಕೆರೆಯ ಸುತ್ತಲಿನ ಪ್ರದೇಶದಲ್ಲಿ ಉದ್ಯಾನವನ ನಿರ್ಮಿಸಿ ವಾಯುವಿಹಾರಕ್ಕೆ ಅನುವಾಗುವಂತೆ ರಸ್ತೆ ನಿರ್ಮಿಸುವುದು ಹಾಗೂ ಬೋಟಿಂಗ್ ವ್ಯವಸ್ಥೆ ಮಾಡುವ ಈ ಮಹತ್ವಾಕಾಂಕ್ಷೆ ಯೋಜನೆಯ ಕಾಮಗಾರಿ ಹಾಸನ ಮೂಲದ ಗುತ್ತಿಗೆದಾರರೊಬ್ಬರು ಫೆಬ್ರವರಿಯಲ್ಲಿ ಆರಂಭಿಸಿದ್ದರು.
ಆದರೆ  ಪ್ರಮುಖ ಜಲಮೂಲವಾಗಿದ್ದ ಕೆರೆಯಲ್ಲಿ ಬಾರಿ ಹೂಳು ತುಂಬಿಕೊಂಡಿದ್ದರಿಂದ ಹೂಳು ತೆಗೆದು ಸಾಗಿಸುವುದು ಗುತ್ತಿಗೆದಾರರಿಗೆ ಬಾರಿ ಸವಾಲಾದರೆ ಕೆರೆಯ ನೀರನ್ನು ಹೊರಗೆ ಹಾಕುವುದು ಮತ್ತೊಂದು ಸವಾಲಾಗಿತ್ತು.
ಆದರೆ, ಸ್ಥಳೀಯ ಅಚ್ಚುಗಟ್ಟುದಾರರ ನೆರವಿನಿಂದ ಈ ಎರಡು ಸಮಸ್ಯೆಗಳು ಬಗೆಹರಿದವಾದರು, ಅಚ್ಚಕಟ್ಟು ಪ್ರದೇಶವನ್ನು ತಾಲೂಕು ಆಡಳಿತ  ಗುರುತಿಸಿಕೊಟ್ಟಿದ್ದರು ಇಲ್ಲಿರುವ ಒತ್ತುವರಿದಾರರನ್ನು ತೆರವುಗೊಳಿಸದ ಕಾರಣ ಗುತ್ತಿಗೆದಾರರು ಕಾಮಗಾರಿ ನಿರ್ವಹಿಸಲು ಅಡ್ಡಿಯಾಗಿದೆ. ಕಾಮಗಾರಿ ಆರಂಭವಾಗಿ ಮೂರು ತಿಂಗಳು ಕಳೆದರೂ ಹೂಳೆತ್ತುವ ಕಾಮಗಾರಿ ಇನ್ನೂ ಆರಂಭವೇ ಆಗದಿರಲು ಕೆರೆಯ ಅಚ್ಚುಕಟ್ಟು ಪ್ರದೇಶವನ್ನು ತಾಲೂಕು ಆಡಳಿತ ಬಿಡಿಸಿಕೊಡದೆ ಇರುವುದು ಕಾರಣ ಎನ್ನಲಾಗುತ್ತಿದ್ದು ಕಾಮಗಾರಿಯನ್ನು ನಿದಾನಗತಿಯಲ್ಲಿ ಮಾಡಲಾಗುತ್ತಿದೆ.
ಮಳೆಗೂ ಮುನ್ನ ಹೂಳು ತೆಗೆಯದಿದ್ದರೆ ಕೆರೆದಂಡೆಯ ಮಧ್ಯದಲ್ಲಿ ನೀರನ್ನು ಹೊರಹಾಕಲು ನಿರ್ಮಿಸಿರುವ ಬಂಡು ಒಡೆದು ಹೋಗುವುದರಿಂದ ಕೆರೆಯ ಅಚ್ಚುಕಟ್ಟು ಪ್ರದೇಶ ಬಾರಿ ಹಾನಿಗೆ ತುತ್ತಾಗುವುದು ನಿಶ್ಚಿತವಾಗಿದೆ. ಒಟ್ಟಿನಲ್ಲಿ ತಾಲೂಕು ಆಡಳಿತ ಅಭಿವೃದ್ಧಿಕಾಮಗಾರಿಗೆ ಅಡ್ಡಿಯಾಗಿರುವ ಅಂಶಗಳನ್ನು ಬಗೆಹರಿಸದಿದ್ದರೆ ಈ ಮಹತ್ವಾಕಾಂಕ್ಷೆಯೋಜನೆ ಅರ್ಧದಲ್ಲೇ ನಿಲ್ಲುವ ಸೂಚನೆ ಎದ್ದು ಕಾಣುತ್ತಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement