ಮರಿ ವೀರಪ್ಪನ್ ಕುಖ್ಯಾತಿಯ ಕಾಡುಗಳ್ಳ ಸರವಣನ್ ಸೆರೆ
ಚೆನ್ನೈ: ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ಮರಿ ವೀರಪ್ಪನ್ ಸರವಣನ್ನನ್ನು ತಮಿಳುನಾಡು ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಇಂದು ಬೆಳಗ್ಗೆ ತಮಿಳುನಾಡಿನ ಪೆನ್ನಾಗರಂ ತಾಲೂಕಿನ ಗೋವಿಂದಪಾಡಿಯಲ್ಲಿ ಸರವಣನ್ನನ್ನು ಮೆಟ್ಟೂರು ಠಾಣಾ ಪೊಲೀಸರು ಬಂಧಿಸಿದ್ದು, ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶಕ್ಕೆ ತೆಗೆದುಕೊಳ್ಳುವಂತೆ ಕರ್ನಾಟಕ ಅರಣ್ಯ ಇಲಾಖೆಗೆ ಸೂಚಿಸಿದ್ದಾರೆ.
ಏ.21ರಂದು ರಾಜ್ಯ ಹುಲಿ ರಕ್ಷಣಾ ಪಡೆ(ಎಸ್ಟಿಪಿಎಫ್) ಸಿಬ್ಬಂದಿ ಮೇಲೆ ಗುಂಡು ಹಾರಿಸಿದ್ದ ಸರವಣನ್ಗಾಗಿ ಕಳೆದ 20 ದಿನಗಳಿಂದ ಪೊಲೀಸರು ಶೋಧ ನಡೆಸುತ್ತಿದ್ದರು. ಆನೆ ದಂತ, ಹುಲಿ ಚರ್ಮ ಕಳ್ಳ ಸಾಗಾಣೆ ಸೇರಿದಂತೆ ಒಟ್ಟು 7 ಪ್ರಕರಣಗಳಲ್ಲಿ ಮರಿ ವೀರಪ್ಪನ್ ರಾಜ್ಯ ಅರಣ್ಯ ಇಲಾಖೆಗೆ ಬೇಕಾಗಿದ್ದ.